600 ಕೋಟಿ ರೂ.ಗಳಿಸಿತು ಕೆಜಿಎಫ್​-2 ..!

KGF 2
Published on

ಮುಂಬೈ: ಯಶ್​​ ಅಭಿನಯದ ಕೆಜಿಎಫ್​-2 ಎಲ್ಲಾ ದಾಖಲೆಯನ್ನು ಸರಿಗಟ್ಟುತ್ತಾ ಬರುತ್ತಿದ್ದು, ಮತ್ತೊಂದು ದಾಖಲೆಯನ್ನು ಮಾಡಿದೆ. ಭಾರತದ ಸಿನಿಮಾ ರಂಗದಲ್ಲೇ ಅತಿ ಹೆಚ್ಚು ಗಳಿಕೆ ಕಂಡ 9ನೇ ಸಿನಿಮಾ ಇದಾಗಿದೆ.

ಐದನೇ ದಿನ 73 ಕೋಟಿ ರೂ.ಗಳಿಸುವ ಮೂಲಕ ಕೇವಲ ಐದೇ ದಿನದಲ್ಲಿ 600 ಕೋಟಿ ರೂ.ಗಳಿಕೆ ಕಂಡಿದೆ.ಇದೇ ವರ್ಷ ಪುಷ್ಪಾ ಹಾಗೂ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಚಿತ್ರ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ ಸೇರಿತ್ತು. ಇದೀಗ ಕೆಜಿಎಫ್​2 ಕೂಡ ಎಲ್ಲಾ ದಾಖಲೆಯನ್ನು ಮುರಿದಿದೆ.

ಕೆಜಿಎಫ್​​2 ದಾಖಲೆ ಮುಂದುವರಿದಿದ್ದು, ಒಟ್ಟು 625 ಕೋಟಿ ರೂ. ಗಳಿಸಿ ಭಾರೀ ದಾಖಲೆ ಬರೆಯುತ್ತಿದೆ ಎಂದು ಸಿನಿಮಾ ಮಾರುಕಟ್ಟೆ ವಿಶ್ಲೇಷಕ ತರಣ್​​ ಆದರ್ಶ್ ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net