PSI ಹುದ್ದೆ ಡೀಲ್​: ನೇಮಕಾತಿ ಪಟ್ಟಿಯಲ್ಲಿದ್ದ 50 ಅಭ್ಯರ್ಥಿಗಳಿಗೆ ಸಿಐಡಿ ನೋಟಿಸ್​

police cid
Published on

ಬೆಂಗಳೂರು: 545 ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ನೇಮಕಾತಿ ಪಟ್ಟಿಯಲ್ಲಿದ್ದ 50 ಅಭ್ಯರ್ಥಿಗಳಿಗೆ ಸಿಐಡಿ ಮಂಗಳವಾರ ನೋಟಿಸ್​ ಜಾರಿ ಮಾಡಿದೆ. ಬುಧವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಪರೀಕ್ಷೆಯ ಹಾಲ್ ಟಿಕೆಟ್​ ಹಾಗೂ ಎರಡನೇ ಪತ್ರಿಕೆಯ OMR ಶೀಟ್ ಜೊತೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net