

ಬೆಂಗಳೂರು: ಕಳೆದ ವರ್ಷ ಪುತ್ರಿ ಐರಾಳ ಮೊದಲ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದ ನಟ ಯಶ್ ಮತ್ತು ರಾಧಿಕಾ ಪಂಡಿತ್, ಈ ವರ್ಷ ಪುತ್ರ ಯಥರ್ವನ ಜನ್ಮದಿನವನ್ನು ಅದಕ್ಕಿಂತ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. ಹಾಗಂತ ಮನೆಯಲ್ಲಿಯೇ ಈ ಜೋಡಿ ಮಗನ ಜನ್ಮದಿನ ಆಚರಿಸಿಲ್ಲ. ಬದಲಿಗೆ ಗೋವಾದಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ.
ಇದನ್ನೂ ಓದಿ: 2050ರಲ್ಲಿ ಶ್ರದ್ಧಾ ಏನ್ ಮಾಡ್ತಾರೆ ಗೊತ್ತಾ?
ಹೌದು, ಕೆಜಿಎಫ್ ಸಿನಿಮಾ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿರುವ ನಟ ಯಶ್, ಮಗನ ಜನ್ಮದಿನದ ನಿಮಿತ್ತ ಕೊಂಚ ಬಿಡುವು ಮಾಡಿಕೊಂಡು ಇಡೀ ಕುಟುಂಬದೊಟ್ಟಿಗೆ ಗೋವಾಕ್ಕೆ ತೆರಳಿದ್ದಾರೆ. ಅಲ್ಲಿನ ಐಶಾರಾಮಿ ಬೋಟ್ವೊಂದರಲ್ಲಿ ಮಗನ ಜನ್ಮದಿನವನ್ನು ಎಲ್ಲರೂ ಸೇರಿ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಹಾಗೇ ಆಚರಿಸಿಕೊಂಡ ವಿಡಿಯೋವನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.