ಹುಚ್ಚಾಟ ನಡೆಸಿ ಗೂಸಾ ತಿಂದ ವೆಂಕಟ್

Hucha Venkat
Published on

ಶ್ರೀರಂಗಪಟ್ಟಣ: ತಾಲೂಕಿನಲ್ಲಿ ಹುಚ್ಚ ವೆಂಕಟ್​ನ ರಂಪಾಟ ಮುಂದುವರಿದಿದ್ದು, ಮಂಗಳವಾರ ದರಸಗುಪ್ಪೆ ಬಳಿಯ ಅಂಗಡಿಯಲ್ಲಿ ಕಬ್ಬಿನ ಜ್ಯೂಸ್ ಕುಡಿದಿದ್ದಾನೆ. ಮಾಲೀಕ ಹಣ ಕೇಳದಿದ್ದರೂ ಅನುಚಿತವಾಗಿ ವರ್ತಿಸಿದ್ದಾನೆ.

ಇದರಿಂದ ಆಕ್ರೋಶಗೊಂಡ ಸ್ಥಳೀಯರು ವೆಂಕಟ್​ನನ್ನು ಥಳಿಸಿದ್ದಾರೆ. ನಾಗಮಂಗಲ ಹೊರವಲಯದಲ್ಲಿರುವ ಮಹದೇಶ್ವರ ಪೆಟ್ರೋಲ್ ಬಂಕ್​ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡ ವೆಂಕಟ್, ಹಣ ನೀಡದೆ ಬಂಕ್ ಸಿಬ್ಬಂದಿ, ಪೊಲೀಸರಿಗೂ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಕೊನೆಗೆ, ಸ್ಥಳೀಯರೊಬ್ಬರು ವೆಂಕಟ್​ಗೆ ಊಟ ತಂದುಕೊಟ್ಟರಲ್ಲದೆ, ಬಂಕ್​ಗೆ ಹಣ ಪಾವತಿಸಿ ತಾಲೂಕಿನ ಗಡಿವರೆಗೂ ಬಿಟ್ಟು ಬೆಂಗಳೂರಿನತ್ತ ಕಳುಹಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net