ಅಕ್ಷಯ್​ ಜತೆಗೆ ಶಾರೂಖ್​ ನಟಿಸೋಕೆ ಸಾಧ್ಯ ಇಲ್ಲ ... ಯಾಕಿರಬಹುದು?

Akshay Kumar and Shahrukh Khan - Final
Published on

ಮುಂಬೈ: 'ದಿಲ್​ ತೋ ಪಾಗಲ್​ ಹೇ' ಚಿತ್ರ ಹೊರತುಪಡಿಸಿದರೆ, ಶಾರೂಖ್​ ಖಾನ್​ ಮತ್ತು ಅಕ್ಷಯ್​ ಕುಮಾರ್​ ಜತೆಯಾಗಿ ನಟಿಸಲಿಲ್ಲ. ಜತೆಯಾಗಿ ನಟಿಸಿದರೂ, ತೆರೆಯ ಮೇಲೆ ಹೆಚ್ಚು ಹೊತ್ತು ಅವರಿಬ್ಬರೂ ಕಾಣಿಸಿಕೊಂಡಿರಲಿಲ್ಲ. ಇಷ್ಟಕ್ಕೂ ಅವರಿಬ್ಬರು ಯಾಕೆ ಜತೆಯಾಗಿ ನಟಿಸುವುದಿಲ್ಲ?

ಇಂಥದ್ದೊಂದು ಪ್ರಶ್ನೆಯನ್ನು ಶಾರೂಖ್​ ಖಾನ್​ ಮುಂದಿಟ್ಟರೆ, 'ಈ ಪ್ರಶ್ನೆಗೆ ನಾನು ಏನು ಹೇಳಲಿ? ಬಹುಶಃ ಅವರಷ್ಟು ಬೇಗ ಏಳುವುದಕ್ಕೆ ನನಗೆ ಸಾಧ್ಯವಾಗುವುದಿಲ್ಲವಾದ್ದರಿಂದ, ಅವರ ಜತೆಗೆ ನಟಿಸುವುದು ಕಷ್ಟ' ಎಂದು ಶಾರೂಖ್​ ಖಾನ್​ ಹೇಳಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನಾನು ಮಲಗುವಾಗ, ಅಕ್ಷಯ ಎದ್ದು ಕೆಲಸಕ್ಕೆ ಹೊರಡುತ್ತಾರೆ. ನಾನು ಕೆಲಸ ಶುರು ಮಾಡುವಷ್ಟರಲ್ಲಿ, ಅವರು ಪ್ಯಾಕಪ್​ ಹೇಳಿ ಮನೆಗೆ ಹೋಗುತ್ತಾರೆ. ನಾನೊಬ್ಬ ನಿಶಾಚರ. ನನಗೆ ತಡರಾತ್ರಿ ಶೂಟಿಂಗ್​ ಮಾಡುವುದಕ್ಕೆ ಇಷ್ಟ. ಆದರೆ, ಅಕ್ಷಯ್​ಗೆ ಬೆಳಿಗ್ಗೆ ಬೇಗ ಎದ್ದು ಕೆಲಸ ಮಾಡುವುದಕ್ಕೆ ಇಷ್ಟ' ಎಂದು ಶಾರೂಖ್​ ಹೇಳಿಕೊಂಡಿದ್ದಾರೆ.

ಒಂದು ಪಕ್ಷ ಅಕ್ಷಯ್​ ಜತೆಗೆ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕರೆ ಏನು ಮಾಡುತ್ತೀರಾ ಎಂಬ ಪ್ರಶ್ನೆಗೆ 'ಅಕ್ಷಯ್​ ಜತೆಗೆ ಕೆಲಸ ಮಾಡುವುದಕ್ಕೆ ಮಜವೇನೋ ಇರುತ್ತದೆ. ಆದರೆ, ನಾವಿಬ್ಬರೂ ಒಟ್ಟಿಗೆ ಸೆಟ್​ನಲ್ಲಿ ಇರುವುದು ಕಷ್ಟ. ಏಕೆಂದರೆ, ನಾನು ಬರುವ ಹೊತ್ತಿಗೆ ಅವರು ಹೊರಟಿರುತ್ತಾರೆ. ನಮ್ಮಿಬ್ಬರ ಸಮಯ ಮ್ಯಾಚ್​ ಆದರೆ, ಖಂಡಿತಾ ಅವರ ಜತೆಗೆ ನಟಿಸುವೆ' ಎಂದು ಶಾರೂಖ್​ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net