More

    ಈಗ ಇನ್ನೊಂದು ಹೊಸ ಚಿತ್ರದ ರಿಲೀಸ್​ ಡೇಟ್​ ಫಿಕ್ಸ್​ ಆಯ್ತು!

    ಬೆಂಗಳೂರು: ಮಂಸೋರೆ ಅಭಿನಯದ ‘ಆಕ್ಟ್​ 1978’ ಚಿತ್ರವು ನವೆಂಬರ್​ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆ ನಂತರ ಬಿಡುಗಡೆಗೆ ಇನ್ನ್ಯಾವ ಚಿತ್ರ ಸಿದ್ಧವಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ‘ಆಕ್ಟ್​ 1978’ ಚಿತ್ರ ಬಿಡುಗಡೆಯಾದ ಮರುವಾರವೇ ಇನ್ನೊಂದು ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ಕಿಚ್ಚನ ‘ಫ್ಯಾಂಟಮ್​’ ಚಿತ್ರಕ್ಕೆ ಮತ್ತೊಬ್ಬ ಪ್ರೊಡ್ಯೂಸರ್ ಬಂದ್ರು

    ಹೌದು, ನವೆಂಬರ್​ 27ಕ್ಕೆ ‘ಗಡಿಯಾರ’ ಎಂಬ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ಶೀತಲ್​ ಶೆಟ್ಟಿ, ದೀಪಕ್​ ರಾಜ್​ ಶೆಟ್ಟಿ, ಯಶ್​ ಶೆಟ್ಟಿ, ಸುಚೇಂದ್ರ ಪ್ರಸಾದ್​, ಶರತ್​ ಲೋಹಿತಾಶ್ವ ಸೇರಿದಂತೆ ಹಲವರು ನಟಿಸಿದ್ದಾರೆ. ಬೆಂಗಳೂರಿನ ಮಾಜಿ ಪೊಲೀಸ್​ ಕಮಿಷನರ್​​ ಎಸ್​.ಪಿ. ಸಾಂಗ್ಲಿಯಾನ ಅವರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇದೊಂದು ನೈಜ ಘಟನೆಯನ್ನಾಧರಿಸಿದ ಚಿತ್ರವಂತೆ. ಕರ್ನಾಟಕದಲ್ಲಿ ನಡೆದ ಒಂದು ಘಟಣೆಯನ್ನಿಟ್ಟುಕೊಂಡು ಪ್ರಭಿಕ್​ ಮೊಗವೀರ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪುರಾತನ ನಿಧಿ ಮತ್ತು ಅದನ್ನು ಹುಡುಕುವುದಕ್ಕೆ ನಡೆಯುವ ಪ್ರಯತ್ನಗಳ ಕುರಿತು ಈ ಕಥೆ ಸಾಗಲಿದ್ದು, ಇದರಿಂದ ನಮ್ಮ ಐತಿಹಾಸಿಕ ಸ್ಥಳಗಳನ್ನು ಯಾವ ರೀತಿ ಹಾಳು ಮಾಡಲಾಗುತ್ತಿದೆ ಎಂಬುದನ್ನು ಹೇಳಲಾಗಿದೆಯಂತೆ. ಇದೊಂದು ವಿಭಿನ್ನ ಚಿತ್ರವಾಗಿದ್ದು, ಎರಡನೇ ಬಾರಿ ನೋಡಿದರೆ ಚಿತ್ರ ಇನ್ನಷ್ಟು ಚೆನ್ನಾಗಿ ಅರ್ಥವಾಗುತ್ತದಂತೆ. ಹಾಗಂತ ಚಿತ್ರದ ಪೋಸ್ಟರ್​ಗಳಲ್ಲೇ ಹೇಳಲಾಗಿದೆ.

    ಇದನ್ನೂ ಓದಿ: ಮಂಗಳಮುಖಿಯಾಗಿ ಬದಲಾದ ಮಿಲಿಂದ್​ ಸೋಮನ್​; ಪತ್ನಿ ಅಂಕಿತಾ ಏನಂತಾರೆ?

    ಪ್ರಭಿಕ್​ ಈ ಚಿತ್ರವನ್ನು ನಿರ್ದೇಶಿಸಿರುವುದಷ್ಟೇ ಅಲ್ಲ, ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ ಈ ಚಿತ್ರದ ನಿರ್ಮಾಣವನ್ನೂ ಅವರೇ ಮಾಡಿದ್ದಾರೆ.

    ಮಂಗಳವಾರದಂದೇ ‘ಮಂಗಳವಾರ ರಜಾ ದಿನ’ ಚಿತ್ರದ ಹಾಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts