ಮಹಾನಟಿ ಸಾವಿತ್ರಿ ತರಹ ಅಂತ್ಯ ಕಾಣೋಕೆ ಇಷ್ಟ ಇರಲಿಲ್ಲ ...

Samantha - Siddarth - Final
Published on

ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ, ಕೆಲವು ವರ್ಷಗಳ ಹಿಂದೆ ಹಿರಿಯ ನಟ ನಾಗಾರ್ಜುನ ಅವರ ಮಗ ನಾಗಚೈತನ್ಯ ಅವರನ್ನು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ, ಅದಕ್ಕೂ ಮುನ್ನ ಅವರು ನಟ ಸಿದ್ಧಾರ್ಥ್​ಗೆ ಬಹಳ ಹತ್ತಿರವಾಗಿದ್ದರು. ಇನ್ನೇನು ಅವರಿಬ್ಬರೂ ಮದುವೆಯಾಗಿಯೇಬಿಟ್ಟರು ಎನ್ನುವಷ್ಟರಲ್ಲಿ ಸಿದ್ಧಾರ್ಥ್​​ ಜೀವನದಿಂದ ಸಮಂತಾ ಹೊರನಡೆದರು.

ಇಷ್ಟಕ್ಕೂ ಸಮಂತಾ ಯಾಕೆ ಸಿದ್ಧಾರ್ಥ್​​ ಅವರನ್ನು ಮದುವೆಯಾಗಲಿಲ್ಲ? ಈ ತರಹದ್ದೊಂದು ಪ್ರಶ್ನೆ ಮಾಧ್ಯಮದವರು ಮತ್ತು ಸಮಂತಾ ಅವರ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡದೆ ದೂರವಿದ್ದ ಸಮಂತಾ, ಸಿದ್ಧಾರ್ಥ್​​ ಜೀವನದಿಂದ ಯಾಕೆ ಹೊರಬಂದೆ ಎನ್ನುವುದನ್ನು ಇದೀಗ ಬಹಿರಂಗಪಡಿಸಿದ್ದಾರೆ.

ಒಂದು ಪಕ್ಷ ನಾನು ಸಿದ್ಧಾರ್ಥ್​​ ಅವರನ್ನು ಮದುವೆಯಾಗಿದ್ದರೆ, ವೈಯಕ್ತಿಕ ಜೀವನದಲ್ಲಿ ಬಹಳ ದೊಡ್ಡ ಸಮಸ್ಯೆಗೆ ಸಿಕ್ಕಿಕೊಳ್ಳುತ್ತಿದ್ದೆ. ಅಷ್ಟೇ ಅಲ್ಲ, ಮಹಾನಟಿ ಖ್ಯಾತಿಯ ಸಾವಿತ್ರಿ ತರಹ ಮಾಡಿಕೊಳ್ಳುತ್ತಿದ್ದೆ. ಆ ತರಣ ಅಂತ್ಯ ಕಾಣೋಕೆ ನನಗೆ ಇಷ್ಟ ಇರಲಿಲ್ಲ. ಅಷ್ಟರಲ್ಲಿ ಇಲ್ಲೇನೋ ಸಮಸ್ಯೆಗಳಿವೆ ಅಂತ ಅನಿಸೋಕೆ ಶುರುವಾಯಿತು. ಹೀಗೆಯೇ ಮುಂದುವರೆದರೆ, ಮುಂದಿನ ದಿನಗಳಲ್ಲಿ ಬದುಕು ನರಕವಾಗುತ್ತದೆ ಎಂಬ ವಿಷಯ ಅರ್ಥವಾಯಿತು. ಅದೇ ಕಾರಣಕ್ಕೆ ಆ ಸಂಬಂಧದಿಂದ ಹೊರಬಂದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಆ ದೊಡ್ಡ ಸಮಸ್ಯೆ ಏನು, ಸಮಂತಾ ತಮ್ಮನ್ನೇಕೆ ಸಾವಿತ್ರಿ ಅವರ ಜತೆಗೆ ಹೋಲಿಸಿಕೊಂಡರು ಮುಂತಾದ ಯಾವುದೇ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲ. ಆದರೆ, ಮಹಾನಟಿ ಚಿತ್ರ ನೋಡಿದವರಿಗೆ ಸೂಕ್ಷ್ಮ ಅರ್ಥವಾಗಬಹುದು. ಅಷ್ಟೇ ಅಲ್ಲ, ಸಾವಿತ್ರಿ ಅವರ ಜೀವನದ ಜತೆಗೆ ಯಾಕೆ ಸಮಂತಾ ಹೋಲಿಸಿಕೊಂಡರು ಎಂಬುದು ಅರ್ಥವಾಗಬಹುದು.

ಕಾರಣ ಏನೇ ಇರಲಿ, ಸಮಂತಾ ಅಂತೂ ಸಿದ್ಧಾರ್ಥ್​​ ಅವರ ಜೀವನದಿಂದ ಹೊರಬಂದರು. ಸಿಂಗಲ್​ ಆಗಿದ್ದ ಅವರು, ನಾಗಚೈತನ್ಯ ಜತೆಗೆ ಮದುವೆಯಾದರು. ನಾಗ್​ ಜತೆಗೆ ಸಾಂಸಾರಿಕ ಜೀವನ ನಡೆಸುತ್ತಿರುವ ಸಮಂತಾ, ತಮ್ಮ ಗಂಡನನ್ನು ಅಪ್ಪಟ ಚಿನ್ನ ಎಂದು ಕರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net