ಅಷ್ಟಕ್ಕೂ ಕಾಮಿಡಿಯನ್ ಕಪಿಲ್ ಶರ್ಮಾ ವೀಲ್ ಚೇರ್ ಮೇಲೆ ಅಡ್ಡಾಡುತ್ತಿರುವುದು ಏಕೆ?

kapil sharma
kapil sharma
Published on

ಮುಂಬೈ: ಜನಪ್ರಿಯ ಕಾಮಿಡಿಯನ್ ಕಪಿಲ್ ಶರ್ಮಾ ಯಾರಿಗೆ ಗೊತ್ತಿಲ್ಲ ಹೇಳಿ. ಹಿಂದಿಯಲ್ಲದೇ ಎಲ್ಲ ಭಾರತೀಯ ಭಾಷೆಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು ತಮ್ಮದೇಯಾದ ವಿಶಿಷ್ಠ ಶೈಲಿಯಲ್ಲಿ ಜನರನ್ನು ರಂಜಿಸುತ್ತಾರೆ.

ಕಪಿಲ್ ಶರ್ಮಾ ಇತ್ತೀಚೆಗೆ ಕೆಲ ದಿನ ಕಿರುತೆರೆಯಲ್ಲಿ ಕಂಡಿಲ್ಲ. ಅದಕ್ಕೆ ಬೇರೆ ಕಾರಣ ಇರಬಹುದು. ಆದರೆ, ಶರ್ಮಾ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ವೀಲ್ ಚೇರ ಮೇಲೆ ತೆರಳುತ್ತಿರುವುದು ಕಂಡು ಬಂದಿತ್ತು. ಅವರು ವೀಲ್​ ಚೇರ್ ಮೇಲೆ ಹೋಗುವ ಫೋಟೊ ವಿಡಿಯೋ ಸಕತ್ ವೈರಲ್ ಆಗಿತ್ತು. ಅವರ ಅಭಿಮಾನಿಗಳು ಕಪಿಲ್ ಶರ್ಮಾಗೆ ಏನೋ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಮಾತನಾಡಿರುವ ಸ್ವತಃ ಕಪಿಲ್ ಶರ್ಮಾ, ಸ್ನೇಹಿತರೇ ನನಗೆ ಏನೂ ಆಗಿಲ್ಲ. ಜಿಮ್​ನಲ್ಲಿ ವರ್ಕ್​ಔಟ್ ಮಾಡುವಾಗ ಬೆನ್ನುಮೂಳೆಗೆ ಸಣ್ಣ ಗಾಯ ಆಗಿದೆ. ಹೀಗಾಗಿ ಸ್ವಲ್ಪದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದ ಎಂದು ಹೇಳಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ

2018 ರಲ್ಲಿ ಗಿನ್ನಿ ಅವರೊಂದಿಗೆ ವಿವಾಹವಾಗಿರುವ ಕಪಿಲ್ ಶರ್ಮಾ ಅವರು, ಇತ್ತೀಚೆಗೆ ಎರಡನೇ ಮಗುವಿಗೆ ತಂದೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net