ವಿವಿಐಪಿ (VVIP) ಮತ್ತು ಜಾಗತಿಕ ಸೆಲೆಬ್ರಿಟಿಗಳಿಗೆ ಅತ್ಯುನ್ನತ ಮಟ್ಟದ ಕ್ಲೋಸ್ ಪ್ರೊಟೆಕ್ಷನ್ ಸೆಕ್ಯೂರಿಟಿ (ನಿಷ್ಠಾವಂತ ವೈಯಕ್ತಿಕ ಭದ್ರತೆ) ಒದಗಿಸುವಲ್ಲಿ ಕೆವಿನ್ ಪರಿಣಿತರು. ಮೂಲಗಳ ಪ್ರಕಾರ, ರಾಮ್ ಚರಣ್ ತಮ್ಮ ರಕ್ಷಣೆಗಾಗಿ ಕೆವಿನ್ ಕುಂಟಾಗೆ ದಿನಕ್ಕೆ 2 ರಿಂದ 4 ಲಕ್ಷ ರೂಪಾಯಿ ವರೆಗೆ ಸಂಭಾವನೆ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಭಾರಿ ಮೊತ್ತದ ಸಂಬಳದೊಂದಿಗೆ ಕೆವಿನ್, ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಸೆಲೆಬ್ರಿಟಿ ಬಾಡಿಗಾರ್ಡ್‌ಗಳ ಸಾಲಿಗೆ ಸೇರಿದ್ದಾರೆ. ಸೂಟು-ಬೂಟು ಧರಿಸಿ, ಸ್ಟೈಲಿಶ್ ಆಗಿ ಕಾಣುವ ಕೆವಿನ್, ಸಾರ್ವಜನಿಕ ಈವೆಂಟ್‌ಗಳಲ್ಲಿ ನಟನತ್ತ ನುಗ್ಗುವ ಬೃಹತ್ ಜನಸಂದಣಿಯನ್ನು ಅತ್ಯಂತ ಚಾಣಾಕ್ಷತನದಿಂದ ನಿಯಂತ್ರಿಸುತ್ತಿದ್ದಾರೆ.