ಸೂರ್ಯಂಗೆ ನಾಯಕಿ ಯಾರು? ರಶ್ಮಿಕಾನಾ, ಮಾಳವಿಕಾನಾ?

Rashmika And Malavika 11 Feb 20
Published on

ಬೆಂಗಳೂರು: ಟಾಲಿವುಡ್ ಮತ್ತು ಕಾಲಿವುಡ್​ನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಹಿಡಿದು ಬಿಜಿಯೆಸ್ಟ್ ನಟಿಯಾಗಿದ್ದಾರೆ. ಅನೌನ್ಸ್ ಆದ ಅವರ ಸಿನಿಮಾಗಳ ಪಟ್ಟಿ ಒಂದೆಡೆಯಾದರೆ, ಇನ್ನೇನು ಘೋಷಣೆ ಮಾಡಬೇಕೆನ್ನುವ ಸಿನಿಮಾಗಳು ಅವರ ಬತ್ತಳಿಕೆಯಲ್ಲಿ ಹಲವಾರಿವೆ. ಆ ಪೈಕಿ ತಮಿಳಿನ ಸ್ಟಾರ್ ನಟ ಸೂರ್ಯ ನಾಯಕತ್ವದ ಚಿತ್ರವೂ ಒಂದು.

ಅಂದರೆ, ಸೂರ್ಯ ನಟಿಸಬೇಕಿರುವ ಹೊಸ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಬರೀ ರಶ್ಮಿಕಾ ಅಷ್ಟೇ ಅಲ್ಲ ನಟಿ ಮಾಳವಿಕಾ ಮೋಹನ್ ಹೆಸರೂ ಕೇಳಿಬರುತ್ತಿದೆ. ಹಾಗಾದರೆ ಸೂರ್ಯಗೆ ನಾಯಕಿ ರಶ್ಮಿಕಾನಾ, ಮಾಳವಿಕಾ ? ಎಂಬ ಪ್ರಶ್ನೆ ಸದ್ಯ ಉದ್ಭವವಾಗಿದೆ.

ಕಾರ್ತಿಕ್ ಸುಬ್ಬರಾಜು ನಿರ್ದೇಶನದ, ರಜನಿಕಾಂತ್ ನಾಯಕನಾಗಿ ನಟಿಸಿದ್ದ ‘ಪೆಟ್ಟಾ’ ಚಿತ್ರದ ಮೂಲಕ ಕಾಲಿವುಡ್​ಗೆ ಪದಾರ್ಪಣೆ ಮಾಡಿದ್ದ ಮಾಳವಿಕಾ ಮೋಹನನ್, ಸೂರ್ಯಗೆ ಜೋಡಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆಯಾದರೂ, ಆ ಸುದ್ದಿ ಇನ್ನು ಅಧಿಕೃತವಾಗಿಲ್ಲ. ಇತ್ತ ಸೂರ್ಯ ನಟನೆಯ ಐದು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಹರಿಕೃಷ್ಣನ್, ಮತ್ತೆ ಆಕ್ಷನ್-ಕಟ್ ಹೇಳುವ ತಯಾರಿಯಲ್ಲಿದ್ದಾರೆ. ಸದ್ಯ ಸೂರ್ಯ ‘ಸೂರರೈ ಪೊಟ್ರು’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಶ್ಮಿಕಾ ‘ಭೀಷ್ಮ’ ಪ್ರಚಾರದ ಜತೆಗೆ ಅಲ್ಲು ಅರ್ಜುನ್, ಕಾರ್ತಿ ಸಿನಿಮಾಗಳತ್ತ ದೃಷ್ಟಿ ಹಾಯಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net