ಮಹೇಶ್ ಎದುರು ಕನ್ನಡ ಸ್ಟಾರ್: ​ಪ್ರಿನ್ಸ್ ಜತೆ ನಟಿಸಲಿರುವ ನಟ ಯಾರು?

UPENDRA SUDEEP
Published on

ಬೆಂಗಳೂರು: ಲಾಕ್​ಡೌನ್ ಸಮಯದಲ್ಲೇ ಮಹೇಶ್ ಬಾಬು ಅಭಿನಯದ ‘ಸರ್ಕಾರಿ ವಾರು ಪಾಟ’ ಚಿತ್ರದ ಬಗ್ಗೆ ಘೋಷಣೆಯಾಗುವುದರ ಜತೆಗೆ, ಪೋಸ್ಟರ್ ಸಹ ಬಿಡುಗಡೆಯಾಗಿತ್ತು.

ಇದೀಗ ತೆಲಂಗಾಣದಲ್ಲಿ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ನೀಡಲಾಗಿದ್ದು, ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಮಧ್ಯೆ, ಚಿತ್ರದಲ್ಲಿ ಕನ್ನಡದ ನಟರೊಬ್ಬರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಉಪೇಂದ್ರ ಮತ್ತು ಸುದೀಪ್ ಅವರ ಹೆಸರು ಕೇಳಿ ಬರುತ್ತಿದೆ.

ಈ ಪೈಕಿ ಉಪೇಂದ್ರ ಆಗಲಿ, ಸುದೀಪ್ ಆಗಲಿ ಚಿತ್ರದಲ್ಲಿ ನಟಿಸುತ್ತಿರುವ ಕುರಿತು ಅಧಿಕೃತವಾಗಿ ಹೇಳಿಕೆ ನೀಡಿಲ್ಲವಾದರೂ, ಇಬ್ಬರಲ್ಲೊಬ್ಬರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್​ನಿಂದ ಈಗ ಸ್ಯಾಂಡಲ್​ವುಡ್​ಗೂ ಬಂದಿದೆ. ಸುದೀಪ್ ಮತ್ತು ಉಪೇಂದ್ರ ಇಬ್ಬರಿಗೂ ತೆಲುಗು ಚಿತ್ರರಂಗ ಹೊಸದಲ್ಲ. ಇಬ್ಬರೂ ಅಲ್ಲಿ ಕೆಲವು ಚಿತ್ರಗಳನ್ನು ಮಾಡಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿ ದೊಡ್ಡ ಅಭಿಮಾನಿ ಬಳಗ ಇಬ್ಬರೂ ನಟರಿಗಿದೆ. ಆದರೆ, ಇಬ್ಬರಲ್ಲಿ ಯಾರು ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net