More

    ಮೊರಟೋರಿಯಂ ಅವಧಿಯಲ್ಲಿ ಬಡ್ಡಿ ಮೇಲೆ ಬಡ್ಡಿ ವಿಧಿಸಿದರೆ ಉದ್ದೇಶ ಈಡೇರುತ್ತದೆಯೇ?: ಸುಪ್ರೀಂ ಕೋರ್ಟ್​ ಪ್ರಶ್ನೆ

    ನವದೆಹಲಿ: ಕೋವಿಡ್ 19 ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಆರಂಭದ ಹಂತದಲ್ಲಿ ಕೇಂದ್ರ ಸರ್ಕಾರ ಲಾಕ್​ ಡೌನ್ ಘೋಷಿಸಿದ ಬೆನ್ನಲ್ಲೇ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಳ್ಳುವ ಕಾರಣ ಸಾಲ ಮರುಪಾವತಿಗೂ ವಿನಾಯಿತಿ ಘೋಷಿಸಿತ್ತು. ಆರಂಭದಲ್ಲಿ ಮಾರ್ಚ್​- ಮೇ ತನಕ, ನಂತರ ಸೆಪ್ಟೆಂಬರ್​ ತನಕ ಇದನ್ನು ವಿಸ್ತರಿಸಿದೆ. ಅಲ್ಲದೆ, ಮೊರಟೋರಿಯಂಗೆ ಸಂಬಂಧಿಸಿದ ಎಲ್ಲ ನಿರ್ಧಾರವನ್ನೂ ಬ್ಯಾಂಕುಗಳಿಗೇ ಬಿಟ್ಟಿತ್ತು. ಹೀಗಾಗಿ ಬ್ಯಾಂಕುಗಳು ಸಾಲ ಮರುಪಾವತಿಗೆ ವಿನಾಯಿತಿ ಘೋಷಿಸಿದರೂ, ಈ ಅವಧಿಯ ಬಡ್ಡಿಯನ್ನೂ ಅಸಲಿಗೆ ಸೇರಿಸಿ ಬಡ್ಡಿ ವಿಧಿಸುವ ಕ್ರಮವನ್ನು ತೆಗೆದುಕೊಂಡವು. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

    ಸುಪ್ರೀಂ ಕೋರ್ಟ್​ನಲ್ಲಿ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್​.ಕೆ.ಕೌಲ್​ ಮತ್ತು ಎಂ.ಆರ್.ಷಾ ಅವರನ್ನು ಒಳಗೊಂಡ ಪೀಠ ಬುಧವಾರ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. ವಾದ-ಪ್ರತಿವಾದಗಳನ್ನು ಆಲಿಸುತ್ತಿದ್ದ ನ್ಯಾಯಪೀಠ, ಕೋವಿಡ್ ಸಂಕಷ್ಟದಿಂದ ಪಾರಾಗುವ ಸಲುವಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಪರಿಣಾಮ ನೇರ ಜನರ ಆರ್ಥಿಕ ಸ್ಥಿತಿಗತಿ ಮೇಲಾಗುವ ಕಾರಣ ಮೊರಟೋರಿಯಂ ಘೋಷಿಸಿದೆ. ಈ ನಿರ್ಧಾರದ ಹಿಂದಿನ ಉದ್ದೇಶ ಈಡೇರುತ್ತಿದೆಯೇ ಎಂಬುದನ್ನು ಸರ್ಕಾರ ಗಮನಿಸಬೇಕಲ್ಲವೇ? ಎಲ್ಲವನ್ನೂ ಬ್ಯಾಂಕುಗಳ ನಿರ್ಧಾರಕ್ಕೆ ಬಿಡುವುದು ಸರಿಯೇ? ಈಗ ಬಡ್ಡಿ ಮೇಲೆ ಬಡ್ಡಿ ವಿಧಿಸುತ್ತಿರುವ ಬ್ಯಾಂಕುಗಳ ನಿರ್ಧಾರಕ್ಕೆ ಯಾವುದೇ ತಳಹದಿ ಇದ್ದಂತೆ ಕಾಣುತ್ತಿಲ್ಲ. ಸರ್ಕಾರ ಈ ವಿಷಯವಾಗಿ ಮಧ್ಯಪ್ರವೇಶಿಸುವುದು ಅವಶ್ಯ ಎಂಬ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

    ಇದನ್ನೂ ಓದಿ: 1,000 ರೂಪಾಯಿ ಬಾಡಿಗೆಗೆ ಬಡವರಿಗೆ ಮನೆ – ಮೋದಿ ಸರ್ಕಾರದ ಯೋಜನೆ

    ಆಗ್ರಾ ನಿವಾಸಿ ಗಜೇಂದ್ರ ಶರ್ಮಾ ಅವರು ಸಲ್ಲಿಸಿದ್ದ ದೂರು ಅರ್ಜಿಯಲ್ಲಿ ಆರ್​ಬಿಐ ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆ ವಿಚಾರ ಪ್ರಸ್ತಾಪಿಸಿದ್ದು ಜನರಿಗಾಗುತ್ತಿರುವ ಹಲವು ತೊಂದರೆಗಳನ್ನು ಉಲ್ಲೇಖಿಸಲಾಗಿದೆ.  ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಪರವಾಗಿ ಸಾಲಿಸಿಟರ್ ಜನರಲ್​ ತುಷಾರ್ ಮೆಹ್ತಾ ವಾದ ಮಂಡಿಸುತ್ತಿದ್ದು, ಬ್ಯಾಂಕುಗಳಲ್ಲಿ 133 ಲಕ್ಷ ಕೋಟಿ ರೂಪಾಯಿ ಠೇವಣಿ ಇದೆ. ಅವುಗಳಿಗೆ ಬಡ್ಡಿ ಪಾವತಿಸಬೇಕಾಗುತ್ತದೆ. ಹೀಗಾಗಿ ಬಡ್ಡಿ ವಿನಾಯಿತಿ ನೀಡಿದರೆ ಅದರ ಪರಿಣಾಮ ಗಂಭೀರವಾಗಿರುತ್ತದೆ ಎಂದು ಕೋರ್ಟ್​ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

    ದಿನದ ಕಲಾಪದಲ್ಲಿ ವಿಚಾರಣೆಯನ್ನು ಕೊನೆಗೊಳಿಸುವ ಮುನ್ನ ನ್ಯಾಯಪೀಠವು, ಪರಿಸ್ಥಿತಿಯನ್ನು ಅವಲೋಕಿಸುವಂತೆ ಕೇಂದ್ರ ಸರ್ಕಾರ ಮತ್ತು ಆರ್​ಬಿಐಗೆ ಸೂಚಿಸಿತು. ಅಲ್ಲದೆ, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್​​ಗೂ ಮೊರಟೋರಿಯಂ ವಿಚಾರವಾಗಿ ಪರಿಶೀಲಿಸುವಂತೆ ಹೇಳಿ ವಿಚಾರಣೆಯನ್ನು ಆಗಸ್ಟ್ ಮೊದಲ ವಾರಕ್ಕೆ ಮುಂದೂಡಿತು. (ಏಜೆನ್ಸೀಸ್)

    ಸಾಲ ಮರುಪಾವತಿಗೆ ವಿನಾಯಿತಿ ತಗೊಳ್ತೀರಾ?- ಹೆಚ್ಚಿನ ಬಡ್ಡಿ ಪಾವತಿಸುವುದಕ್ಕೆ ಸಿದ್ಧರಾಗಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts