ಬಾಹುಬಲಿ ಚಿತ್ರದ ಮೊದಲ ದಿನದ ಶೂಟಿಂಗ್ ಹೇಗಿತ್ತು ಒಮ್ಮೆ ನೋಡಿ...

EcNjAuQUcAEQ5Fj
Published on

ಭಾರತೀಯ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಬಾಹುಬಲಿ, ಇಂದಿಗೂ ಮಾಸ್ಟರ್ಪೀಸ್ ಸಿನಿಮಾ. ಈಗಷ್ಟೇ ಈ ಸಿನಿಮಾ ಬಿಡುಗಡೆ ಆಗಿದೆ ಎನಿಸುತ್ತದೆ. ಅಷ್ಟೊಂದು ಫ್ರೆಶ್​ ಆಗಿದೆ ಅದರ ದೃಶ್ಯಾವಳಿಗಳು. ಅಷ್ಟಕ್ಕೂ ಈಗ್ಯಾಕೆ ಬಾಹುಬಲಿ ವಿಷಯ ಬಂತು ಎಂಬುದು ನಿಮಗೆ ಕುತೂಹಲ ಇರಬಹುದು. ಅದಕ್ಕೂ ಉತ್ತರ ಇದೆ.

ಹೌದು, ಜುಲೈ 6, 2013ಕ್ಕೆ ಬಾಹುಬಲಿ ಚಿತ್ರದ ಮೊದಲ ದಿನದ ಶೂಟಿಂಗ್​ಗೆ ಚಾಲನೆ ನೀಡಲಾಗಿತ್ತು. ಅಂದರೆ ಸೋಮವಾರಕ್ಕೆ ಸರಿಯಾಗಿ ಏಳು ವರ್ಷಗಳ ಹಿಂದೆ ಈ ಚಿತ್ರ ಶುರುವಾಗಿತ್ತು. ಅದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡು ಮತ್ತೆ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ರಾಜಮೌಳಿ.

ಪ್ರಭಾಸ್​, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ ಸೇರಿ ಹಲವು ಸ್ಟಾರ್ ಕಲಾವಿದರೆಲ್ಲ ಬಾಹುಬಲಿ ಸರಣಿಯ ಭಾಗವಾಗಿದ್ದರು. ಆ ಸರಣಿಯ ಸಿನಿಮಾದಿಂದ ಬಹುತೇಕ ಎಲ್ಲರ ಸಿನಿಮಾ ಗ್ರಾಫ್​ ಸಹ ಏರಿಕೆ ಕಂಡಿತ್ತು. ಪ್ರಭಾಸ್​ ಪ್ಯಾನ್​ ಇಂಡಿಯಾ ಹೀರೋ ಆಗಿ ಬೆಳೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net