

Mahesh Babu : ಇಡೀ ಚಿತ್ರರಂಗದಲ್ಲಿ ಇಂದು ಪ್ಯಾನ್ ಇಂಡಿಯಾ ಕಲ್ಪನೆ ಆವರಿಸಿಕೊಂಡಿದೆ. ಅದರಲ್ಲೂ ಸ್ಟಾರ್ ನಾಯಕರು ಮಾಡುತ್ತಿರುವ ಪ್ರತಿಯೊಂದು ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿವೆ. ತೆಲುಗು, ಕನ್ನಡ ಹಾಗೂ ತಮಿಳಿನ ಬಹುತೇಕ ಎಲ್ಲ ಸ್ಟಾರ್ ನಟರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ.
ಆದರೆ, ತೆಲುಗಿನ ಸೂಪರ್ಸ್ಟಾರ್ ಮಹೇಶ್ ಬಾಬು, ಈವರೆಗೆ ಒಂದೇ ಒಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ. ಇದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ. ಏಕೆಂದರೆ, ಮಹೇಶ್ ಬಾಬು ಸಾಮಾನ್ಯ ನಟರಲ್ಲ. ಅವರೊಬ್ಬ ಸೂಪರ್ಸ್ಟಾರ್. ಹೀಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಏಕೆ ಮಾಡಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ಕಾರಣ ಏನೆಂಬುದು ಇದೀಗ ಬಹಿರಂಗವಾಗಿದೆ.
ತಮ್ಮ ಸಹನಟರು ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸೂಪರ್ ಯಶಸ್ಸನ್ನು ಸಾಧಿಸುತ್ತಿರುವಾಗ, ಇಲ್ಲಿಯವರೆಗೆ ಮಹೇಶ್ ಬಾಬು ಏಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ವಾಸ್ತವವಾಗಿ, ಮಹೇಶ್ ಬಾಬು ಅವರಿಗೆ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಆಸಕ್ತಿ ಇರಲಿಲ್ಲ ಏಕೆಂದರೆ, ಅವರಿಗೆ ಬಂದ ಸ್ಕ್ರಿಪ್ಟ್‌ಗಳು ಪ್ಯಾನ್ ಇಂಡಿಯಾ ಕಥೆಗಳಾಗಿರಲಿಲ್ಲ ಎಂದು ತಿಳಿದುಬಂದಿದೆ.
ಸದ್ಯ ಮಹೇಶ್ ಬಾಬು, ರಾಜಮೌಳಿ ಅವರೊಂದಿಗೆ ಕೆಲಸ ಮಾಡುತ್ತಿರುವ ಸಿನಿಮಾವೂ ಪ್ಯಾನ್ ಇಂಡಿಯಾ ಕತೆಯನ್ನು ಹೊಂದಿದೆ. ಅಲ್ಲದೆ, ಪ್ಯಾನ್ ವರ್ಲ್ಡ್ಗೂ ಲಿಂಕ್ ಆಗಲಿದ್ದು, ಆ ಸಿನಿಮಾದ ಮೂಲಕ ಒಂದೇ ಬಾರಿ ಪ್ಯಾನ್ ವರ್ಲ್ಡ್ ಅನ್ನು ಅಲ್ಲಾಡಿಸಲು ಮಹೇಶ್ ಬಾಬು ಅವರು ಎದುರು ನೋಡುತ್ತಿದ್ದಾರೆ. ರಾಜಮೌಳಿ ಅವರ ಸಿನಿಮಾದೊಂದಿಗೆ ಮಹೇಶ್ ಬಾಬು ಅವರು ದೊಡ್ಡ ಯಶಸ್ಸನ್ನು ಸಾಧಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.
ಏನೇ ಇರಲಿ, ಮಹೇಶ್ ಬಾಬು ಓರ್ವ ಉತ್ತಮ ನಟ ಅನ್ನೋದರಲ್ಲಿ ಯಾವುದೇ ಡೌಟ್ ಇಲ್ಲ. ತೆಲುಗು ಚಿತ್ರರಂಗದಲ್ಲಿ ಇಲ್ಲಿಯವರೆಗೆ ಯಾರೇ ಯಶಸ್ಸು ಸಾಧಿಸಿದ್ದರೂ, ಮಹೇಶ್ ಬಾಬು ಅವರ ಸಾಧನೆ ಅವರೆಲ್ಲರಿಗಿಂಗ ಒಂದು ಹೆಜ್ಜೆ ಮುಂದಿರುತ್ತದೆ. ಮಹೇಶ್ ಬಾಬು ಅವರು ಮಾಡಿದ ಪ್ರತಿಯೊಂದು ಚಿತ್ರವೂ ಪ್ರೇಕ್ಷಕರನ್ನು ಮೆಚ್ಚಿಸಿದೆ ಮತ್ತು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದೆ. ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ಅವರ ಮೊದಲ ಚಿತ್ರ ಇದಾಗಿದ್ದರೂ, ಅವರಿಬ್ಬರ ಕಾಂಬಿನೇಷನ್ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ಈ ಚಿತ್ರ ಆ ನಿರೀಕ್ಷೆಗಳನ್ನು ಪೂರೈಸುತ್ತದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ. (ಏಜೆನ್ಸೀಸ್)