ನಡೆದಾಡಲು ಪರದಾಟ... ಖ್ಯಾತ ನಟಿ ರಂಭಾ ಸ್ಥಿತಿ ನೋಡಿ ಕಳವಳ ವ್ಯಕ್ತಪಡಿಸಿದ ಅಭಿಮಾನಿಗಳು! Actress Rambha

ನಡೆದಾಡಲು ಪರದಾಟ... ಖ್ಯಾತ ನಟಿ ರಂಭಾ ಸ್ಥಿತಿ ನೋಡಿ ಕಳವಳ ವ್ಯಕ್ತಪಡಿಸಿದ ಅಭಿಮಾನಿಗಳು! Actress Rambha
ನಡೆದಾಡಲು ಪರದಾಟ... ಖ್ಯಾತ ನಟಿ ರಂಭಾ ಸ್ಥಿತಿ ನೋಡಿ ಕಳವಳ ವ್ಯಕ್ತಪಡಿಸಿದ ಅಭಿಮಾನಿಗಳು! Actress Rambha
Published on

ಪ್ರಮುಖ ಮುಖ್ಯಾಂಶಗಳು

  • ಸರಿಯಾಗಿ ನಡೆಯಲು ಪರದಾಡುತ್ತಿರುವ 90ರ ದಶಕದ ಗ್ಲಾಮರ್ ಕ್ವೀನ್ ರಂಭಾಗೆ ಏನಾಯಿತು?
  • ಚಿತ್ರರಂಗವನ್ನೇ ಆಳಿದ್ದ ಸ್ಟಾರ್ ನಟಿಯ ಇಂದಿನ ಸ್ಥಿತಿಗೆ ಅಂದಿನ ಆಕ್ಸಿಡೆಂಟ್ ಕಾರಣವೇ?
  • ಗಣನೀಯವಾಗಿ ತೂಕ ಹೆಚ್ಚಿಸಿಕೊಂಡು ಮಂಕಾದ ಮುಖದೊಂದಿಗೆ ಕಾಣಿಸಿಕೊಂಡ ನಟಿ
  • ತೇಜಸ್ಸಿಲ್ಲದ ಮುಖ, ದಯನೀಯ ಸ್ಥಿತಿಯಲ್ಲಿ ಕಾಣಿಸಿಕೊಂಡ ಹಿರಿಯ ನಟಿ ರಂಭಾ
Actress Rambha : ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ರಂಭಾ ಅವರ ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅದನ್ನು ನೋಡಿದ ಅಭಿಮಾನಿಗಳು ತೀವ್ರ ಆಘಾತ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋದಲ್ಲಿ ನಟಿ ರಂಭಾ ಅವರು ನಡೆದಾಡಲು ಪರದಾಡುತ್ತಿದ್ದು, ಅಯ್ಯೋ ರಂಭಾಗೆ ಏನಾಯಿತು ಎಂದು ಫ್ಯಾನ್ಸ್​ ಪ್ರಶ್ನೆ ಮಾಡುತ್ತಿದ್ದಾರೆ.
ಅಂದಹಾಗೆ, ಸಿನಿಮಾಗಳಿಂದ ದೂರ ಸರಿದ ನಂತರ ಕೆಲವು ಕಾರ್ಯಕ್ರಮಗಳಲ್ಲಿ ಮಾತ್ರ ಸಾಂದರ್ಭಿಕವಾಗಿ ಕಾಣಿಸಿಕೊಳ್ಳುತ್ತಾ, ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ರಂಭಾ ಅವರ ಈ ಹೊಸ ವಿಡಿಯೋ ಝಲಕ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಕೆಲವು ವರ್ಷಗಳ ಹಿಂದೆ, ರಂಭಾ ಅವರು ತಮ್ಮ ಪತಿಯ ವ್ಯವಹಾರಗಳನ್ನು ನೋಡಿಕೊಳ್ಳಲು ವಿದೇಶದಲ್ಲಿದ್ದಾಗ ಅವರ ಇಡೀ ಕುಟುಂಬವು ಅನಿರೀಕ್ಷಿತವಾಗಿ ಒಂದು ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿತ್ತು. ಅದೃಷ್ಟವಶಾತ್ ಆ ಭೀಕರ ಅಪಘಾತದಿಂದ ಇಡೀ ಕುಟುಂಬವು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿತ್ತು ಮತ್ತು ನಂತರದ ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿತ್ತು.
ಆದರೆ, ಪ್ರಸ್ತುತ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಇತ್ತೀಚಿನ ದೃಶ್ಯದಲ್ಲಿ ನಟಿ ರಂಭಾ ಅವರು ಗಣನೀಯವಾಗಿ ತೂಕ ಹೆಚ್ಚಿಸಿಕೊಂಡಿರುವುದು, ಸರಿಯಾಗಿ ನಡೆಯಲು ಸಾಧ್ಯವಾಗದೆ ಕಷ್ಟಪಡುತ್ತಿರುವುದು ಮತ್ತು ಅವರ ಮುಖ ತೇಜಸ್ಸಿಲ್ಲದೆ ತೀರಾ ಮಂಕಾಗಿರುವುದು ಕಂಡುಬಂದಿದೆ.
ವಿಡಿಯೋದಲ್ಲಿ ರಂಭಾರನ್ನು ಸೂಕ್ಷ್ಮವಾಗಿ ಗಮನಿಸಿರುವ ಅಭಿಮಾನಿಗಳು ಒಂದು ಕಾಲದಲ್ಲಿ ಚಿತ್ರರಂಗವನ್ನೇ ಆಳಿದ ಸ್ಟಾರ್​ ನಟಿಗೆ ಏನಾಯಿತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಂಭಾ ಅವರ ಇಂದಿನ ಈ ದಯನೀಯ ಸ್ಥಿತಿಗೆ ಅಂದು ನಡೆದ ಆ ಭೀಕರ ಕಾರು ಅಪಘಾತದ ಆಘಾತವೇ ಕಾರಣವಿರಬಹುದೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆತಂಕದಿಂದ ಚರ್ಚಿಸುತ್ತಿದ್ದಾರೆ.
ಅಂದಹಾಗೆ, ರಂಭಾ ಅವರು 90ರ ದಶಕದಲ್ಲಿ ಸಕ್ರಿಯವಾಗಿದ್ದ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರು. ಮೂಲ ಹೆಸರು ವಿಜಯಲಕ್ಷ್ಮಿ ಯೀಡಿ. ರಜನಿಕಾಂತ್, ಅಜಿತ್, ವಿಜಯ್, ಸಲ್ಮಾನ್ ಖಾನ್, ಚಿರಂಜೀವಿ ಮತ್ತು ಮಮ್ಮುಟ್ಟಿ, ರವಿಚಂದ್ರನ್​, ಶಿವರಾಜ್​ ಕುಮಾರ್​ ಸೇರಿದಂತೆ ಭಾರತದ ಸ್ಟಾರ್‌ಗಳೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ.
2010ರಲ್ಲಿ ಕೆನಡಾ ಮೂಲದ ಉದ್ಯಮಿ ಇಂದ್ರಕುಮಾರ್​ ಪದ್ಮನಾಥನ್ ಅವರನ್ನು ಮದುವೆಯಾದ ನಂತರ ರಂಭಾ ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ಟೊರೊಂಟೊದಲ್ಲಿ ನೆಲೆಸಿದ್ದಾರೆ. ರಂಭಾ ಅವರಿಗೆ ಮೂವರು ಮಕ್ಕಳಿದ್ದಾರೆ. ಅದರಲ್ಲಿ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನಿದ್ದಾನೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net