ಹೌದು, ಭದ್ರಗಿರಿ ಗಿರಿಜನ ಕಲ್ಯಾಣ ಹೆಣ್ಣುಮಕ್ಕಳ ಆಶ್ರಮ ಶಾಲೆಯ ಶಿಕ್ಷಕಿಯಾದ ಹೇಮನಿ ಅವರು, ತೀವ್ರ ಜ್ವರದಿಂದಾಗಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದ 11 ವರ್ಷದ ಏಳನೇ ತರಗತಿಯ ವಿದ್ಯಾರ್ಥಿನಿ ಭುವನೇಶ್ವರಿಯನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಜೂನ್ 30 ರಂದು ನಡೆದ ಈ ಹೃದಯಸ್ಪರ್ಶಿ ಘಟನೆಯಲ್ಲಿ, ಆಸ್ಪತ್ರೆಗೆ ತಲುಪಲು ಯಾವುದೇ ದಾರಿಯಿಲ್ಲದ ಕಾರಣ ದಟ್ಟವಾದ ಕಾಡಿನ ನಡುವೆ ಕಿಲೋಮೀಟರ್‌ಗಟ್ಟಲೆ ದೂರ ಆ ಬಾಲಕಿಯನ್ನು ತಮ್ಮ ಹೆಗಲ ಮೇಲೆಯೇ ಹೊತ್ತು ಸಾಗಿ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಮೂಲಕ ಆಕೆಯ ಜೀವ ಉಳಿಸಿದ್ದಾರೆ.