ಜುಲೈ 08ರಂದು 'ವೆಡ್ಡಿಂಗ್​ ಗಿಫ್ಟ್​' ಕೊಡ್ತಾರಂತೆ ಸೋನು ...

Wedding GiftFINAL
Published on

Wedding ಬೆಂಗಳೂರು: ಪ್ರೇಮಾ ಅಭಿನಯದಲ್ಲಿ ವಿಕ್ರಂ ಪ್ರಭು, 'ವೆಡ್ಡಿಂಗ್​ ಗಿಫ್ಟ್​​' ಎಂಬ ಚಿತ್ರವನ್ನು ಕಳೆದ ವರ್ಷ ಶುರು ಮಾಡಿದ್ದು ನೆನಪಿರಬಹುದು. ಈಗ ಆ ಚಿತ್ರ ಸದ್ದಿಲ್ಲದೆ ಮುಗಿದಿದೆ ಮತ್ತು ಟ್ರೇಲರ್​ ಸಹ ಬಿಡುಗಡೆಯೂ ಆಗಿದೆ. ಅಷ್ಟೇ ಅಲ್ಲ, ಜುಲೈ 08ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಗಂಡ-ಹೆಂಡತಿ ಸಂಬಂಧ ಜನುಮಜನುಮಗಳ ಅನುಬಂಧ ಎಂಬ ನಂಬಿಕೆ ನಮ್ಮ ದೇಶದಲ್ಲಿದೆ. ಮದುವೆಯಾದ ಹೊಸತರಲ್ಲೇ ಈ ಸಂಬಂಧದಲ್ಲಿ ಬಿರುಕು ಬಂದರೆ ಏನಾಗುತ್ತದೆ? ಎಂಬ ವಿಷಯವನ್ನಿಟ್ಟುಕೊಂಡು 'ವೆಡ್ಡಿಂಗ್​ ಗಿಫ್ಟ್​' ಕೊಡುವುದಕ್ಕೆ ಸಜ್ಜಾಗಿದ್ದಾರೆ ವಿಕ್ರಂ ಪ್ರಭು. ನಿಶಾಂತ್ ಮತ್ತು ಸೋನುಗೌಡ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರೇಮಾ ಬಹಳ ವರ್ಷಗಳ ನಂತರ ಲಾಯರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಲವ್​' ಚಿತ್ರದಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಕ್ರಂ ಪ್ರಭು, ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ನಿರ್ಮಾಣ ಸಹ ಮಾಡಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಈ ಚಿತ್ರದ ಮುಹೂರ್ತವಾಗಿದ್ದು, ಈ ಜುಲೈನಲ್ಲಿ ತೆರೆ ಕಾಣುತ್ತಿದೆ.

ತಾವು ಸಾಮಾನ್ಯವಾಗಿ ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವ ಪ್ರೇಮಾ, 'ವಿಕ್ರಂಪ್ರಭು ಅವರು ಕಥೆ ಹೇಳಿದ ತಕ್ಷಣ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಅಂತಹ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ನಾನು ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ' ಎನ್ನುತ್ತಾರೆ.

ಒಬ್ಬ ನಟಿಯಾಗಿ ಎಲ್ಲ ತರಹದ ಪಾತ್ರಗಳನ್ನೂ ಮಾಡಬೇಕು ಎನ್ನುವ ಸೋನು ಗೌಡ, 'ಈ ಚಿತ್ರದಲ್ಲಿ ಪಾಸಿಟಿವ್ ಹಾಗೂ ನೆಗಟಿವ್ ಎರಡು ಪಾತ್ರಗಳಲ್ಲೂ ಅಭಿನಯಿಸಿದ್ದೇನೆ. ಹಾಗೊಂದು ವೇಳೆ ನೆಗಟಿವ್ ಪಾತ್ರ ನೋಡುಗರಿಗೆ ಹಿಡಿಸಿತೆಂದರೆ, ಅದು ನನ್ನ ನಿಜವಾದ ಗೆಲುವು' ಎನ್ನುತ್ತಾರೆ ನಟಿ ಸೋನು ಗೌಡ.

ಈ ಚಿತ್ರದಲ್ಲಿ ಅಚ್ಯುತ್​ ಕುಮಾರ್, ಪವಿತ್ರಾ ಲೋಕೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net