ಆದರೆ, ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರಂತೆ. ಹೌದು, ಇದೇ ಏಪ್ರಿಲ್ 13 ರಿಂದಲೇ ನಟಿ ಆಲಿಯಾ ಭಟ್ ಹಾಗೂ ನಟ ರಣ್‌ಬೀರ್ ಕಪೂರ್ ಮದುವೆಯ ಸಂಭ್ರಮಗಳು ಆರಂಭ ಆಗಲಿದೆಯಂತೆ. ಏಪ್ರಿಲ್ 13 ರಂದು ಮೆಹೆಂದಿ ಕಾರ್ಯಕ್ರಮ ನಡೆಯಲಿದ್ದು, 14 ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆಯಂತೆ. ಇನ್ನು, ಏಪ್ರಿಲ್ 15 ರಂದು ಈ ಜೋಡಿ ಹಸೆಮಣೆ ಏರಲಿದೆ ಎಂಬ ಮಾಹಿತಿಗಳು ಸದ್ಯ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.