More

    ಉತ್ತರ ಭಾರತದಲ್ಲಿ 12 ಗಂಟೆಗಳಲ್ಲಿ 3.35 ಕೋಟಿ ಪ್ರೀ-ಬಿಸ್ನೆಸ್! ಸೌತ್​ನಲ್ಲಿ ಹೇಗಿದೆ ‘ಕೆಜಿಎಫ್: 2’ ಟಿಕೆಟ್ ಸೇಲ್?

    ಮುಂಬೈ: ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಆರ್‌ಆರ್‌ಆರ್ಚಿತ್ರದ ಬಳಿಕ ಸೌತ್, ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ಅಭಿನಯದ ಕೆಜಿಎಫ್: ಚಾಪ್ಟರ್ 2′ ಸಿನಿಮಾ ಒಂದು ಬಹುನಿರೀಕ್ಷಿತ ಸಿನಿಮಾ ಆಗಿದೆ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಬೇರೆ ದೇಶಗಳಲ್ಲೂ ಮತ್ತು ಎಲ್ಲೆಲ್ಲೂ ಕೆಜಿಎಫ್: ಚಾಪ್ಟರ್ 2′ ಚಿತ್ರದ ಬಿಡುಗಡೆಯ ಬಗ್ಗೆಯೇ ಚರ್ಚೆಯಾಗುತ್ತಿದೆ. ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಅಲ್ಲದೇ ಎಲ್ಲಾ ಸಿನಿಪ್ರಿಯರು ಈ ಸಿನಿಮಾ ನೋಡಲು ತುಂಬಾ ಉತ್ಸುಕರಾಗಿದ್ದಾರೆ. ಕೆಜಿಎಫ್ 1′ರ ಬಳಿಕ ಬರೋಬ್ಬರಿ 3 ವರ್ಷಗಳ ನಂತರ ಆ ಸಿನಿಮಾದ ಸೀಕ್ವೆಲ್ ಆಗಿರುವ ಕೆಜಿಎಫ್: ಚಾಪ್ಟರ್ 2′ ಈಗ ಬಿಡುಗಡೆಯಾಗುತ್ತಿದ್ದು, ಯಶ್ ಅವರನ್ನು ಅಭಿಮಾನಿಗಳು ತೆರೆ ಮೇಲೆ ನೋಡಲು ಕಾದು ಕುಳಿತ್ತಿದ್ದಾರೆ.
    ಏಪ್ರಿಲ್ 14 2022 ರಂದು ವಿಶ್ವಾದ್ಯಂತ ಈ ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ, ಚಿತ್ರ ನೋಡಲು ಆನ್​ಲೈನ್​ನಲ್ಲಿ ಟಿಕೆಟ್ ಬುಕ್ಕಿಂಗ್ ಅನ್ನು ಏಪ್ರಿಲ್ 7 ರಂದು BookMyShow ನಲ್ಲಿ ಉತ್ತರ ಭಾರತದ, ತಮಿಳುನಾಡಿನ, ಕೇರಳದ ಅಭಿಮಾನಿಗಳಿಗೆ ತೆರೆಯಲಾಗಿತ್ತು. ಇನ್ನು, ಇದಕ್ಕೂ ಮುನ್ನ ಏಪ್ರಿಲ್ 2 ರಂದು UK ನಲ್ಲಿ ಸಿನಿಮಾಗೆ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಕೇವಲ 12 ಗಂಟೆಗಳಲ್ಲಿ ಚಿತ್ರದ 5 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಅಂದಹಾಗೆ, ಸಿನಿಮಾ ರಿಲೀಸ್​ಗೂ ಮುಂಗಡವಾಗಿ UK ನಲ್ಲಿ ಇಷ್ಟು ಟಿಕೆಟ್‌ಗಳನ್ನು ಬಿಕ್ಕಿಂಗ್ ಪಡೆದಿರುವ ಮೊದಲ ಭಾರತದ ಸಿನಿಮಾ ಕೆಜಿಎಫ್: ಚಾಪ್ಟರ್ 2′ ಎನ್ನಲಾಗಿದೆ

    ಉತ್ತರ ಭಾರತದಲ್ಲಿ 12 ಗಂಟೆಗಳಲ್ಲಿ 3.35 ಕೋಟಿ ಪ್ರೀ-ಬಿಸ್ನೆಸ್! ಸೌತ್​ನಲ್ಲಿ ಹೇಗಿದೆ 'ಕೆಜಿಎಫ್: 2' ಟಿಕೆಟ್ ಸೇಲ್?

    ಈ ಮೂಲಕ ವಿದೇಶದಲ್ಲಿಯೂ ಕೆಜಿಎಫ್: 2′ ದಾಖಲೆಗಳನ್ನು ಬರೆಯುತ್ತಿದೆ. ಸದ್ಯ, ಉತ್ತರ ಭಾರತದ, ತಮಿಳುನಾಡಿನ, ಕೇರಳದ ಅಭಿಮಾನಿಗಳಿಗೆ ಟಿಕೆಟ್ ಆರಂಭವಾಗಿದ್ದು, ಸಿನಿಮಾ ಉತ್ತರ ಭಾರತದಲ್ಲಿಯೂ ದಾಖಲೆ ಬರೆದಿದೆ. ಹೌದು, ಟಿಕೆಟ್ ಬುಕ್ಕಿಂಗ್ ಆರಂಭವಾದ ಕೇವಲ 12 ಗಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್​ಗಳು ಸೋಲ್ಡ್​ಔಟ್ ಆಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಂದರೆ, ಕೇವಲ 12 ಗಂಟೆಗಳಲ್ಲಿ ಸಿನಿಮಾ ಬರೋಬ್ಬರಿ 3.35 ಕೋಟಿ ರೂಪಾಯಿ ಪ್ರೀಬಿಸ್ನೆಸ್ ಮಾಡಿದೆಯಂತೆ. ‘ಹೌದು, ‘ಕೆಜಿಎಫ್: 2′ ಚಿತ್ರಕ್ಕೆ ಉತ್ತರ ಭಾರತದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಇದಕ್ಕೆ ಉದಾಹರಣೆ ಎಂದರೆ ರಿಲೀಸ್ ಆದ ಕೇವಲ 24 ಗಂಟೆಗಳಲ್ಲಿ ಕೆಜಿಎಫ್: ಚಾಪ್ಟರ್ 2′ ಚಿತ್ರದ ಹಿಂದಿ ಟ್ರೈಲರ್ ಬರೋಬ್ಬರಿ 5 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿರುವುದು.
    ಅದನ್ನು ಗಮನಿಸಿದ ಚಿತ್ರತಂಡವೂ ಮುಂಬೈ ಮತ್ತು ದೆಹಲಿಯಲ್ಲಿ ಸಿನಿಮಾದ ಪ್ರಚಾರವನ್ನು ಭರ್ಜರಿಯಾಗಿಯೇ ಮಾಡಿದೆ. ಉತ್ತರ ಭಾರತದ ಹಲವು ನಗರಗಳಲ್ಲಿ ಈ ಚಿತ್ರತಂಡ ಸಿನಿಮಾಗೆ ಹಲವು ವಿಭಿನ್ನ ವಿಧಾನಗಳಲ್ಲಿ ಪ್ರಚಾರ ಮಾಡುತ್ತಿದೆ ಸಿನಿಮಾತಂಡ. ಕೆಲ ಉತ್ತರ ಭಾರತದ ಸಿನಿಮಾ ತಜ್ಞರ ಪ್ರಾಕರ ಕೆಜಿಎಫ್: 2′ನ ಹಿಂದಿ ವರ್ಷನ್ ಸಿನಿಮಾ ರಿಲೀಸ್ ಆದ ಮೊದಲ ದಿನವೇ 15 ಕೋಟಿ ಗಳಿಸಿ ಬಳಿಕ ಒಂದು ವಾರದೊಳಗೆ 100 ಕೋಟಿ ಗಳಿಸಬಹುದು ಎನ್ನಲಾಗಿದೆ. ಜತೆಗೆ, ತಮಿಳುನಾಡಿನ 250 ಚಿತ್ರಮಂದಿರಗಳಲ್ಲಿ ಬೀಸ್ಟ್ಸಿನಿಮಾಗೆ ಪೈಪೋಟಿಯಾಗಿ ರಿಲೀಸ್ ಆಗಲಿರುವ ಕೆಜಿಎಫ್: 2′ ಬುಕ್ಕಿಂಗ್, ಕೇರಳದಲ್ಲಿಯೂ ಸಿನಿಮಾದ ಬುಕ್ಕಿಂಗ್ ಭರ್ಜರಿಯಾಗಿಯೇ ಮುಂದುವರಿದಿದೆ ಎಂಬ ಮಾಹಿತಿ ಇದೆ. ಆದರೆ, ಎಷ್ಟು ಟಿಕೆಟ್​ಗಳು ಸೋಲ್ಡ್​ಔಟ್, ಪ್ರೀರಿಲೀಸ್ ಕಲೆಕ್ಷನ್ ಎಷ್ಟು ಎಂಬದು ಇನ್ನು ತಿಳಿಯಬೇಕಿದೆ.
    ನಟ ದಳಪತಿ ವಿಜಯ್ ಅವರ ಬೀಸ್ಟ್ಸಿನಿಮಾ ತಮಿಳುನಾಡಿನಲ್ಲಿ 800 ಚಿತ್ರಮಂದಿರಗಳಲ್ಲಿ ಏಪ್ರಿಲ್ 13 ರಂದು ರಿಲೀಸ್ ಆಗಲಿದೆ. ಹಾಗಾಗಿ, ‘ಕೆಜಿಎಫ್: 2′ಗೆ ತಮಿಳುನಾಡಿನಲ್ಲಿ ಕೇವಲ 250 ಚಿತ್ರಮಂದಿರಗಳನ್ನು ನೀಡಲಾಗಿದೆ. ಮತ್ತೊಂದೆಡೆ, ‘ಕೆಜಿಎಫ್: ಚಾಪ್ಟರ್ 2′ ಸಿನಿಮಾದ ತೆಲುಗು ಟ್ರೈಲರ್ ಕೂಡಾ 3 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಹಿಂದಿಯ ನಂತರ ತೆಲುಗಿನಲ್ಲಿ ಕೆಜಿಎಫ್: 2′ ಸಿನಿಮಾಗೆ ಹೆಚ್ಚು ಬೇಡಿಕೆ ಇದೆ ಎಂದು ತಿಳಿದುಬಂದಿದೆ. ಆದರೆ, ಆಂಧ್ರಪ್ರದೇಶದಲ್ಲಿ ಮತ್ತು ತೆಲಂಗಾಣದಲ್ಲಿ ಹಾಗೂ ಕರ್ನಾಟಕದಲ್ಲಿ ಕೆಜಿಎಫ್: ಚಾಪ್ಟರ್ 2′ ಬುಕಿಂಗ್ ಏಪ್ರಿಲ್ 10 ರಂದು ತೆರೆಯಲಾಗುವುದು. ಹಾಗಾಗಿ, ಈ ಎರಡು ತೆಲುಗು ರಾಜ್ಯಗಳಲ್ಲಿ, ಕರ್ನಾಟಕದಲ್ಲಿ ಕೆಜಿಎಫ್: ಚಾಪ್ಟರ್ 2′ ಪ್ರೀರಿಲೀಸ್ ಬಿಸ್ನೆಸ್ ಎಷ್ಟು ಆಗಬಹುದು ಎಂದು ತಿಳಿಯಲು ಕಾದು ನೋಡಬೇಕಿದೆ

    ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! ‘ಡೇಂಜರಸ್’ಗೆ ನೋ ರಿಲೀಸ್; ಕಾರಣ?

    ಕನಸ್ಸಿನ ಮನೆಯ ಗುಟ್ಟು ಬಿಚ್ಚಿಟ್ಟ ನಟಿ ಪ್ರಿಯಾಂಕಾ ತಿಮ್ಮೇಶ್; ಹೇಗಿರಬೇಕಂತೆ ಗೊತ್ತಾ?

    ಅಣ್ಣನ ಕೊನೆಯ ಸಿನಿಮಾಗೆ ಧ್ವನಿಯಾದ ತಮ್ಮ ಧ್ರುವ ಸರ್ಜಾ! ‘ರಾಜಮಾರ್ತಾಂಡ’ ರಿಲೀಸ್ ಯಾವಾಗ?

    ಕೇವಲ ಆರು ದಿನಗಳಲ್ಲಿ ಪುನೀತ್ ರಾಜ್​ಕುಮಾರ್ ‘ಜೇಮ್ಸ್’ ಸಿನಿಮಾ ಒಟಿಟಿಯಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts