ದಕ್ಷಿಣ ಸಿನಿಮಾದವನೆಂದು ಅವಮಾನಿಸಲಾಗಿತ್ತು: ಬಾಲಿವುಡ್​​ ಬಗೆಗಿನ ಕಹಿಸತ್ಯ ಬಿಚ್ಚಿಟ್ಟ ಸೂಪರ್​ ಸ್ಟಾರ್​ ಚಿರಂಜೀವಿ!

Chiranjeevi
Published on

ಹೈದರಾಬಾದ್​: ಭಾರತೀಯ ಸಿನಿಮಾ ಎಂದರೆ ಕೇವಲ ಬಾಲಿವುಡ್​ ಸಿನಿಮಾಗಳಷ್ಟೇ ಎಂದುಕೊಂಡಿದ್ದ ಕಾಲ ಈಗ ಬದಲಾಗಿದೆ. ಬಾಲಿವುಡ್​ನ್ನು ಮೀರಿ ದಕ್ಷಿಣ ಭಾರತದ ಸಿನಿಮಾಗಳು ಇಂದು ವಿಶ್ವದಾದ್ಯಂತ ಬೆಳೆದು ನಿಂತಿದೆ.

ಆದರೆ ಹಿಂದೆ ಹೀಗಿರಲಿಲ್ಲ. ದಕ್ಷಿಣ ಭಾರತದ ಸಿನಿಮಾಗಳೆಂದರೆ ಸಾಕು ಬಾಲಿವುಡ್​ ಮಂದಿ ಮೂಗು ಮುರಿಯುತ್ತಿದ್ದ ಕಾಲವದು. ಆ ಸಮಯದಲ್ಲಿ ನಾನು ಕೂಡ ಅವಮಾನಕ್ಕೊಳಗಾಗಿದ್ದೆ ಎಂಬ ಕಹಿಸತ್ಯವನ್ನು ತೆಲುಗು ಖ್ಯಾತ ನಟ ಚಿರಂಜೀವಿ  ಬಿಚ್ಚಿಟ್ಟಿದ್ದಾರೆ.

1988ರಲ್ಲಿ  ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಿದ ವೇಳೆ ನನಗೆ ಅವಮಾನ ಮಾಡಲಾಗಿತ್ತು. ಸಿನಿಮಾದ ಎಲ್ಲಾ ಗಣ್ಯರು ಅಲ್ಲಿದ್ದರು. ಒಂದು ದೊಡ್ಡದಾದ ಹಾಲ್​ನಲ್ಲಿ ಎಲ್ಲರಿಗೂ ಟೀ ನೀಡಲಾಗುತ್ತಿತ್ತು. ಅಲ್ಲಿ ಗೋಡೆಗಳ ಮೇಲೆ ಹಿಂದಿ ಚಿತ್ರದ ರಾಜ್​ ಕಪೂರ್​ ಅವರಿಂದ ಹಿಡಿದು ಎಲ್ಲಾ ನಟರ ಚಿತ್ರ ವಿವರಣೆಯನ್ನು ಹಾಕಿದ್ದರು. ಆದರೆ ದಕ್ಷಿಣ ಭಾರತದ ನಟರ ಸಣ್ಣ ಚಿತ್ರವನ್ನು ಮೂಲೆಯಲ್ಲಿ ಹಾಕಿ ಕೈ ಬಿಡಲಾಗಿತ್ತು. ಇನ್ನು ನಮ್ಮನ್ನು ಸಹ ಅಷ್ಟು ಗೌರವಗಳಿಂದ ನೋಡಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಆಚಾರ್ಯ ಚಿತ್ರದ ಸಮಾರಂಭದಲ್ಲಿ ಚಿರಂಜೀವಿ ಅವರು ಈ ವಿಷಯವನ್ನು ಹೇಳಿಕೊಂಡಿದ್ದಾರೆ.ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನಿಮಾಗಳೆಂದರೆ ಅಷ್ಟಕ್ಕಷ್ಟೇ, ಇನ್ನು ಇಲ್ಲಿನ ನಟರಿಗೂ ಕೂಡ ಯಾವುದೇ ಗೌರವಗಳಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ದಕ್ಷಿಣದ ಸಿನಿಮಾಗಳನ್ನು ನೋಡಿ ಬಾಲಿವುಡ್​ ಹೆದರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net