11 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ 'ದಿ ಕಾಶ್ಮೀರ್​ ಫೈಲ್ಸ್​' ನಿರ್ದೇಶಕರ ಹೊಸ ಚಿತ್ರ …

The Vaccine War
Published on

ಮುಂಬೈ: 'ದಿ ಕಾಶ್ಮೀರ್​ ಫೈಲ್ಸ್​' ಚಿತ್ರದ ನಂತರ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ಯಾವುದಿರಬಹುದು ಎಂದು ಅವರ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಆದರೆ, ವಿವೇಕ್​ ಈ ಪ್ರಶ್ನೆಗೆ ಉತ್ತರ ಕೊಟ್ಟಿರಲಿಲ್ಲ. ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದ ಅವರು, ಹೊಸ ಚಿತ್ರದೊಂದಿಗೆ ವಾಪಸ್ಸು ಬರುವ ಹಿಂಟ್​ ಕೊಟ್ಟಿದ್ದರು.

ಈಗ ವಿವೇಕ್​ ಕೊನೆಗೂ ತಮ್ಮ ಹೊಸ ಚಿತ್ರದ ಘೋಷಣೆಯನ್ನು ಗುರುವಾರ ಮಾಡಿದ್ದಾರೆ. ತಮ್ಮ ಹೊಸ ಚಿತ್ರದ 'ದಿ ವ್ಯಾಕ್ಸಿನ್​ ವಾರ್​'ನ ಮೊದಲ ಪೋಸ್ಟರ್​ವೊಂದನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

'ದಿ ವ್ಯಾಕ್ಸಿನ್​ ವಾರ್​' ಚಿತ್ರವು ನೈಜ ಘಟನೆಯೊಂದನ್ನು ಆಧರಿಸಿದೆಯಂತೆ. ಇದು ಕರೊನಾ ಕುರಿತಾದ ಕಥೆಯಾ? ಎಂಬ ಬಗ್ಗೆ ಅವರು ಮಾತಾಡಿಲ್ಲ. 'ನಮಗೆ ಗೊತ್ತೇ ಆಗದಂತೆ, ನಾವು ಗೆದ್ದ ಒಂದು ಯುದ್ಧದ ಕಥೆ ಇದು ...' ಎಂದು ಹೇಳಿಕೊಂಡಿರುವ ಅವರು, ಈ ಚಿತ್ರವನ್ನು 2023ರ ಸ್ವಾತಂತ್ರ್ಯ ದಿನದಂದು ಬಿಡಗುಡೆ ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದ್ದಾರೆ.

ಐ ಆಮ್​ ಬುದ್ಧ ಸಂಸ್ಥೆಯಡಿ ಈ ಚಿತ್ರವನ್ನು ನಟಿ ಪಲ್ಲವಿ ಜೋಷಿ ನಿರ್ಮಿಸುತ್ತಿದ್ದಾರೆ. 11 ಭಾಷೆಗಳಲ್ಲಿ ಈ ಚಿತ್ರವು ಏಕಕಾಲಕ್ಕೆ ಬಿಡುಗಡೆಯಾಗಲಿದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net