ಹಳೇ ಕಥೆ ಹೊಸ ಸ್ಪರ್ಶ; ವಿಷ್ಣುಪ್ರಿಯರ ಪ್ರೇಮ್ ಕಹಾನಿ

Vishnupriya
Published on

ಬೆಂಗಳೂರು: ನಿರ್ವಪಕ ಕೆ. ಮಂಜು ಮಗ ಶ್ರೇಯಸ್​ಗೆ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿ ನಟಿಸುವ ಆಸೆ ಇತ್ತಂತೆ. ಆದರೆ, ಚಿತ್ರೀಕರಣಕ್ಕೆ ಹೋದಾಗ ಅಲ್ಲಿ ಬರೀ ಹಸಿರು, ಮಂಜು ಇತ್ತಂತೆ. ಚಿತ್ರತಂಡದವರು ದುಡ್ಡು ಉಳಿಸೋಕೆ ಇಲ್ಲಿಗೆ ಬಂದರಾ ಎಂಬ ಅನುಮಾನ ಅವರನ್ನು ಕಾಡಿದೆ. ಆದರೆ, ಒಮ್ಮೆ ಚಿತ್ರೀಕರಣವಾದ ದೃಶ್ಯಗಳನ್ನು ನೋಡಿದಾಗ ಅವರಿಗೆ ಖುಷಿಯಾಗಿದೆ. ಅಷ್ಟೇ ಅಲ್ಲ, ಚಿತ್ರತಂಡದವರ ಕ್ಷಮೆಯನ್ನೂ ಕೇಳಿದರಂತೆ...

ಶ್ರೇಯಸ್ ಇದನ್ನೆಲ್ಲ ನೆನಪು ಮಾಡಿಕೊಂಡಿದ್ದು, ‘ವಿಷ್ಣುಪ್ರಿಯಾ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ. ಈ ಚಿತ್ರದ ಚಿತ್ರೀಕರಣವೆಲ್ಲ ಮುಗಿದು, ಬಿಡುಗಡೆಗೆ ಸಜ್ಜಾಗುತ್ತಿದೆ. ಅದಕ್ಕೂ ಮುನ್ನ ಟ್ರೇಲರ್ ಬಿಡುಗಡೆಯಾಗಿದೆ. ಅದಕ್ಕೆಂದೇ ಪುನೀತ್ ಬಂದಿದ್ದರು. ಇಂದ್ರಜಿತ್ ಲಂಕೇಶ್ ಇದ್ದರು. ಆನಂದ್ ಆಡಿಯೋ ಶ್ಯಾಮ್ ನಿರ್ವಪಕರಾದ ರಮೇಶ್ ರೆಡ್ಡಿ, ಕೆ. ಮಂಜು, ನಿರ್ದೇಶಕ ವಿ.ಕೆ. ಪ್ರಕಾಶ್ ... ಇವರೆಲ್ಲರ ಸಮ್ಮುಖದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಟ್ರೇಲರ್ ನೋಡಿದ ಪುನೀತ್ ವಿನೋದ್ ಭಾರತಿ ಅವರ ಛಾಯಾಗ್ರಹಣವನ್ನು ಮೆಚ್ಚಿಕೊಂಡರು. ‘ಎಲ್ಲರೂ ತಮ್ಮ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ. ಅದರಲ್ಲೂ ಛಾಯಾಗ್ರಹಣ ಇನ್ನೂ ಚೆನ್ನಾಗಿದೆ. ನಿರ್ದೇಶಕ ಪ್ರಕಾಶ್ ಮೂಲತಃ ಆಡ್ ಫಿಲಂ ಮೇಕರ್. ನೋಡುವುದಕ್ಕೆ ಸಾಧಾರಣವಾಗಿ ಕಂಡರೂ ಅವರೊಬ್ಬ ಅದ್ಭುತ ತಂತ್ರಜ್ಞ. ಕನ್ನಡದಲ್ಲಿ ಅವರು ಹೆಚ್ಚು ಸಿನಿಮಾಗಳನ್ನು ಮಾಡಲಿ. ಮಂಜಣ್ಣಂಗೆ ಈ ಚಿತ್ರದಿಂದ ಲಾಭ ಬರಲಿ’ ಎಂದು ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net