ರಿತೇಶ್-ಜೆನಿಲಿಯಾ ಲವ್​ ಸ್ಟೋರಿಯಲ್ಲಿ ವಿಲನ್ ಎಂಟ್ರಿ! ಯಾರು ಗೊತ್ತಾ?

rithesh
Published on

ಮುಂಬೈ: ಬಾಲಿವುಡ್​ನ ನಟ ರಿತೇಶ್ ಮತ್ತು ನಟಿ ಜೆನಿಲಿಯಾ ದಂಪತಿಗೆ ಅಪಾರ ಪ್ರಮಾಣ ಅಭಿಮಾನಿಗಳಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆ್ಯಕ್ಟಿವ್ ಇರುವ ಆ ಜೋಡಿ ಅನೇಕರ ಮನಸ್ಸನ್ನು ಕದ್ದಿರುವುದಂತೂ ಸುಳ್ಳಲ್ಲ. ಆದರೆ ಇದೀಗ ಆ ಜೋಡಿಯ ಮಧ್ಯೆ ಒಂದು ವಿಲನ್ ಎಂಟ್ರಿ ಆಗಿದೆ. ಯಾರು ಆ ವಿಲನ್? ಆತ ಮಾಡಿದ್ದೇನು ಎನ್ನುವ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಜೆನಿಲಿಯಾ ಮತ್ತು ರಿತೇಶ್ ಪೋಸ್ಟ್​ಗಳನ್ನು ನೋಡುವ ಅದೆಷ್ಟೋ ದಂಪತಿ ತಾವೂ ಹಾಗೇ ಬದುಕಬೇಕು ಎಂದುಕೊಳ್ಳುತ್ತಾರೆ. ಅಷ್ಟು ಅನ್ಯೋನ್ಯವಾಗಿದೆ ಅವರಿಬ್ಬರ ಬದುಕು. ಇತ್ತೀಚೆಗೆ ಜೆನಿಲಿಯಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಲವ್ ಸ್ಟೋರಿಯ ವಿಲನ್ ಕೂಡ ಇದ್ದಾರೆ!

ದಂಪತಿಯ ಲವ್​ಗೆ ಮುಳ್ಳಾಗಿರುವುದು ಬೇರಾರೂ ಅಲ್ಲ, ಅವರೇ ಸಾಕಿರುವ ನಾಯಿ. ಹೌದು! ಜೆನಿಲಿಯಾ ಮತ್ತು ರಿತೇಶ್ ರೊಮ್ಯಾಂಟಿಕ್​ ಮೂಡ್​ನಲ್ಲಿ ಒಬ್ಬರಿಗೊಬ್ಬರು ಕಿಸ್ ಮಾಡಿಕೊಳ್ಳಲು ಮುಂದಾಗುತ್ತಾರೆ. ಆಗ ಅಲ್ಲೇ ಇದ್ದ ಅವರ ನಾಯಿ, ಮಧ್ಯೆ ಮೂಗು ತೂರಿಸಿ, ಜೆನಿಲಿಯಾಗೆ ತಾನೇ ಮುತ್ತಿಕ್ಕಲು ಆರಂಭಿಸುತ್ತದೆ. ಆಕೆ ಗಂಡನ ಬಳಿ ಹೋಗುವುದಕ್ಕೂ ಬಿಡದೆ ಮುದ್ದಾಡಲು ಆರಂಭಿಸುತ್ತದೆ. ಸಪ್ಪೆ ಮೋರೆ ಹಾಕಿಕೊಳ್ಳುವ ರಿತೇಶ್ ತಾವೂ ನಾಯಿಗೆ ಮುತ್ತು ಕೊಡುತ್ತಾರೆ. ಈ ಫನ್ನಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net