ವಿಜಯ್​ ಎಂಬ 'ಬೀಸ್ಟ್​' ... ಇಳಯದಳಪತಿ ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಪೋಸ್ಟರ್​​

Beast - Final
Published on

ಚೆನ್ನೈ: ಕಾಲಿವುಡ್​ ನಟ ವಿಜಯ್​ ಅವರ ಹುಟ್ಟುಹಬ್ಬಕ್ಕೆ, ಅವರ ಹೊಸ ಚಿತ್ರದ ತಂಡದಿಂದ ಒಂದು ಸರ್​ಪ್ರೈಸ್​ ಎಂಬ ಸುದ್ದಿ ಮೂರ್ನಾಲ್ಕು ದಿನಗಳಿಂದ ಕೇಳಿಬರುತ್ತಲೇ ಇತ್ತು. ಅದರಂತೆ ನಾಳೆ (ಜೂನ್​ 22) ವಿಜಯ್​ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಏನು ಸರ್​ಪ್ರೈಸ್​ ಕೊಡಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರೂ. ಆದರೆ, ವಿಜಯ್​ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚೆಯೇ, ಚಿತ್ರತಂಡ ಹೊಸ ಪೋಸ್ಟರ್​ ಬಿಡುಗಡೆ ಮಾಡಿದೆ.

ವಿಜಯ್​ ಅಭಿನಯದ ಹೊಸ ಚಿತ್ರಕ್ಕೆ 'ಬೀಸ್ಟ್​' ಎಂದು ಹೆಸರಿಡಲಾಗಿದೆ. ಬೀಸ್ಟ್​ ಎಂದರೆ ಪ್ರಾಣಿ ಎಂದರ್ಥ. ಈ ಚಿತ್ರವನ್ನು ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶಿಸಿದರೆ, ಸನ್​ ಪಿಕ್ಚರ್ಸ್​ ಸಂಸ್ಥೆ ನಿರ್ಮಿಸುತ್ತಿದೆ. ಇದು ವಿಜಯ್​ ಅವರ 65ನೇ ಚಿತ್ರವಾಗಲಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

'ಬೀಸ್ಟ್​' ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಏಪ್ರಿಲ್​ನಲ್ಲಿ ಒಂದು ಹಂತದ ಚಿತ್ರೀಕರಣ ಜಾರ್ಜಿಯಾದಲ್ಲಿ ಮುಗಿದಿದೆ. ಎರಡನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಮುಂದಿನ ವರ್ಷದ ಸಂಕ್ರಾಂತಿಗೆ ಚಿತ್ರದ ಬಿಡುಗಡೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ, ಈ ಚಿತ್ರದಲ್ಲಿ ವಿಜಯ್​ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಅಭಿನಯಿಸುತ್ತಿದ್ದು, ಅನಿರುದ್ಧ್​ ರವಿಚಂದರ್​ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು, ಮನೋಜ್​ ಪರಮಹಂಸ, 'ಬೀಸ್ಟ್​' ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net