ತಮಿಳು ಅಭಿಮಾನದಿಂದ ಅಲ್ಲು ಅರ್ಜುನ್​ ನಾಯಕತ್ವದ ‘ಪುಷ್ಪ‘ ಚಿತ್ರದಿಂದ ಹಿಂದೆ ಸರಿದ್ರಾ ವಿಜಯ್ ಸೇತುಪತಿ? ಅಸಲಿ ಕಾರಣ ಬಿಚ್ಚಿಟ್ಟ ಕಾಲಿವುಡ್​ನ ಮಕ್ಕಳ್​ ಸೆಲ್ವನ್​..

ಸೇತು
Published on

ಸುಕುಮಾರ್​ ನಿರ್ದೇಶನದ, ಅಲ್ಲು ಅರ್ಜುನ್​ ನಾಯಕತ್ವದ ‘ಪುಷ್ಪ’ ಚಿತ್ರ ಇತ್ತೀಚೆಗಷ್ಟೇ ಪೋಸ್ಟರ್​ ರಿಲೀಸ್​ ಮಾಡಿಕೊಂಡು ಅಭಿಮಾನಿಗಳಿಗೆ ಉಡುಗೊರೆ ನೀಡಿದೆ. ಈ ಸಿನಿಮಾದಲ್ಲಿ ವಿಜಯ್​ ಸೇತುಪತಿ ಖಳನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಮೇಲೆ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಪುಷ್ಪ ಚಿತ್ರದಿಂದ ವಿಜಯ್​ ಸೇತುಪತಿ ಹಿಂದೆ ಸರಿದ್ದಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಅದಕ್ಕೆ ಡೇಟ್​​ ಕ್ಲ್ಯಾಷ್​ ಎಂಬ ಬಣ್ಣ ಹಚ್ಚಲಾಗಿತ್ತು. ಆದರೆ, ಅಸಲಿ ಕಥೆಯೇ ಬೇರೆಯೇ ಇದೆ.
ಹೌದು, ವಿಜಯ್​ ಸೇತುಪತಿಗೆ ಈ ಸಿನಿಮಾ ಕೇವಲ ತೆಲುಗಿನಲ್ಲಷ್ಟೇ ತೆರೆಕಾಣಲಿದೆ ಎಂಬುದನ್ನು ನಿರ್ದೇಶಕರು ಹೇಳಿಕೊಂಡಿದ್ದರು. ಆ ಕಾರಣಕ್ಕೆ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದರು. ಯಾವಾಗ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹೊರಬಿತ್ತೋ, ಆಗ ಸಿನಿಮಾದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದರು ವಿಜಯ್​. ‘ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಾನು ವಿಲನ್​ ಆಗಿ ಕಾಣಿಸಿಕೊಳ್ಳಬಲ್ಲೆ. ಆದರೆ, ತಮಿಳಿನಲ್ಲಿ ಖಳನಾಗಲು ಸಿದ್ಧನಿಲ್ಲ. ಅಲ್ಲಿ ಬೇಕಾದರೆ ಬೇರೆ ನಟನನ್ನು ಬಳಸಿಕೊಳ್ಳಿ‘ ಎಂದಿದ್ದಾರಂತೆ.
ಸದ್ಯ ಚಿತ್ರತಂಡ ಮುಂದೇನು ಎಂಬ ಬಗ್ಗೆ ವಿಚಾರಿಸುತ್ತಿದ್ದು, ಎಲ್ಲ ಭಾಷೆಗಳಲ್ಲಿ ಒಬ್ಬನೇ ಖಳನಿರ್ತಾನಾ ಅಥವಾ ವಿಜಯ್​ ಸೇತುಪತಿ ಅವರನ್ನೇ ಮತ್ತೊಮ್ಮೆ ಮನವೊಲಿಸುತ್ತಾರಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net