

ಟಾಮ್ ಆ್ಯಂಡ್ ಜೆರ್ರಿ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿ ಪುಟಾಣಿಗೂ ಟಾಮ್ ಮತ್ತು ಜೆರ್ರಿ ಅಂದರೆ ಪಂಚಪ್ರಾಣ. ಮಕ್ಕಳಷ್ಟೇ ಅಲ್ಲ ಹಿರಿಯರಿಗೂ ಆ ಸೀರಿಯಲ್ ನಗುತರಿಸದೇ ಇರದು. ಇದೀಗ ಇದೇ ಟಾಮ್ ಆ್ಯಂಡ್ ಜೆರ್ರಿ ಟೀಮ್ನಿಂದ ಸ್ಯಾಡ್ ಸುದ್ದಿಯೊಂದು ಹೊರಬಿದ್ದಿದೆ. ಈ ಧಾರಾವಾಹಿ ನಿರ್ದೇಶಿಸಿದ್ದ ಅಮೆರಿಕ ಮೂಲದ 95 ವರ್ಷದ ಜೆನಿ ಡಿಚ್ ಇತ್ತೀಚೆಗೆ ನಿಧನರಾಗಿದ್ದಾರೆ. 1961ರಿಂದ 62ರ ಅವಧಿಯಲ್ಲಿ 13 ಏಪಿಸೋಡ್ಗಳನ್ನು ಜೆನಿ ನಿರ್ದೇಶಿಸಿದ್ದರು. 1960ರಲ್ಲಿ ಬೆಸ್ಟ್ ಎನಿಮೇಟೆಡ್ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಹ ಜಿನಿಗೆ ಒಲಿದುಬಂದಿತ್ತು. (ಏಜೆನ್ಸೀಸ್)