ನಟಿ ತಮನ್ನಾ ಡೇಟಿಂಗ್​ ಸೀಕ್ರೆಟ್​ ರಿವೀಲ್​! ಬಾಯ್​ಫ್ರೆಂಡ್​ ಜೊತೆ ಮಿಲ್ಕಿ ಬ್ಯೂಟಿ ಲಿಪ್​ಲಾಕ್​, ವಿಡಿಯೋ ವೈರಲ್​

Tamannah
Published on

ಮುಂಬೈ: ತಮನ್ನಾ ಭಾಟಿಯಾ, ತಮ್ಮ 15ನೇ ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್​ ಡೆಬ್ಯೂ ಮಾಡಿದರು. ಈಗ ಅವರಿಗೆ 32 ವರ್ಷ. ಕಳೆದ 17 ವರ್ಷಗಳ ಕರಿಯರ್​ನಲ್ಲಿ ಕನ್ನಡ, ಹಿಂದಿ, ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಅವರಿಗೆ ಕೈತುಂಬ ಆಫರ್​ಗಳಿವೆ. ಇದರ ನಡುವೆಯೇ ಕೆಲವು ದಿನಗಳಿಂದ ಅವರ ಮದುವೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹಬ್ಬಿತ್ತು. ಅದು ತಮನ್ನಾ ಗಮನಕ್ಕೆ ಬರುವಷ್ಟರಲ್ಲಿ, ರೆಕ್ಕೆಪುಕ್ಕ ಎಲ್ಲಾ ಸೃಷ್ಟಿಯಾಗಿ ಹುಡುಗನ ಬಗ್ಗೆ ಇಲ್ಲಸಲ್ಲದ ಮಾಹಿತಿಯೂ ಸೇರಿಕೊಂಡಿತ್ತು.

ಇದೀಗ ಹೊಸ ವರ್ಷದ ಸಂಭ್ರಮಾಚರಣೆಯ ವಿಡಿಯೋವೊಂದು ವೈರಲ್​ ಆಗಿದ್ದು, ಮದುವೆ ವಿಚಾರಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದಂತಾಗಿದೆ. ಬಾಲಿವುಡ್​ ನಟ ವಿಜಯ್​ ವರ್ಮಾ ಜೊತೆ ತಮನ್ನಾ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಅದಕ್ಕೆ ಕಾರಣ ಹೊಸ ವರ್ಷದ ವಿಡಿಯೋ. ನಟಿ ತಮನ್ನಾ ಗೋವಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ದು, ಈ ವೇಳೆ ವಿಜಯ್​ ವರ್ಮಾರನ್ನು ತಬ್ಬಿಕೊಂಡು, ಕಿಸ್​ ಮಾಡಿರುವ ದೃಶ್ಯ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಇಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲದೆ, ಗಲ್ಲಿ ಬಾಯ್​ ಚಿತ್ರದ ನಟ ವಿಜಯ್​ ವರ್ಮಾ ಕಳೆದ ಡಿ.21ರಂದು ತಮನ್ನಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿದ್ದರು.

ರೆಡ್ಡಿಟ್‌ ಜಾಲತಾಣ ವೇದಿಕೆಯಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಹೊಸ ವರ್ಷವನ್ನು ಸಂಭ್ರಮಿಸುತ್ತಿರುವ ಜನರ ನಡುವೆ ವಿಜಯ್​ ವರ್ಮಾ ಮತ್ತು ತಮನ್ನಾ ಪರಸ್ಪರ ಅಪ್ಪಿಕೊಂಡು ಚುಂಬಿಸುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಆದಾಗ್ಯೂ, ವಿಜಯ್ ಆಗಲಿ ಅಥವಾ ತಮನ್ನಾ ಆಗಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿಲ್ಲ. ತಮ್ಮ ಸಂಬಂಧವನ್ನು ರಹಸ್ಯವಾಗಿ ಉಳಿಸಿಕೊಳ್ಳಲು ಇಬ್ಬರು ಪ್ರಯತ್ನಿಸುತ್ತಿದ್ದಾರೆ. ಆದರೂ ಆಗಾಗ ಇಬ್ಬರು ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇಬ್ಬರ ನಡುವೆ ಏನೋ ಇದೆ ಎಂಬ ಸಂದೇಹವನ್ನು ಹುಟ್ಟು ಹಾಕಿರುವುದಂತೂ ನಿಜ. ಇದೀಗ ವಿಡಿಯೋ ವೈರಲ್​ ಆಗಿರುವುದು ಎಲ್ಲದಕ್ಕೂ ಸ್ಪಷ್ಟನೆ ನೀಡಿದಂತಿದೆ.

ಸಿನಿಮಾ ವಿಚಾರಕ್ಕೆ ಬಂದರೆ, ತಮನ್ನಾ ಅವರು 2023 ರಲ್ಲಿ ತೆಲುಗು ಚಿತ್ರ ಭೋಲಾ ಶಂಕರ್, ಹಿಂದಿ ಚಿತ್ರ ಬೋಲೆ ಚುಡಿಯನ್ ಮತ್ತು ಮಲಯಾಳಂ ಚಿತ್ರ ಬಾಂದ್ರಾದಲ್ಲಿ ನಟಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net