ಜೋಗದ ಗುಂಡಿಯಲ್ಲಿ ವಿಜಯ್ ತೇಜಸ್ವಿನಿ; ಥ್ರಿಲ್ಲರ್ ಜೋಗ 101 ಚಿತ್ರದಲ್ಲಿ ನಟನೆ

Viji
Published on

ಬೆಂಗಳೂರು: ನಟ ವಿಜಯ್ ರಾಘವೇಂದ್ರ ಹೊಸ ಬಗೆಯ ಪ್ರಯತ್ನಗಳತ್ತ ಹೊರಳಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ತೋರುತ್ತಿವೆ ಅವರು ಆಯ್ದುಕೊಳ್ಳುವ ಚಿತ್ರಗಳು. ಇತ್ತೀಚೆಗೆ ಒಟಿಟಿಯಲ್ಲಿ ತೆರೆಕಂಡ ‘ಸೀತಾರಾಮ್ ಬಿನೋಯ್’ ತನಿಖಾ ಶೈಲಿಯ ಚಿತ್ರವಾಗಿತ್ತು. ಬಿಡುಗಡೆಗೆ ರೆಡಿಯಾಗಿರುವ ‘ಸಾವಿತ್ರಿ’ ಹಾರರ್ ಸಿನಿಮಾ. ಇದೀಗ ‘ಜೋಗ 101’ ಎಂಬ ಹೊಸ ಚಿತ್ರಕ್ಕೂ ಅವರು ನಾಯಕನಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಶೂಟಿಂಗ್​ನಲ್ಲಿಯೂ ವಿಜಯ್ ನಿರತರಾಗಿದ್ದಾರೆ. ‘ಸೆವೆನ್ ಸ್ಟಾರ್ ಪಿಕ್ಚರ್ಸ್’ ಬ್ಯಾನರ್​ನಲ್ಲಿ ನಿರ್ವಣವಾಗುತ್ತಿರುವ ಈ ಚಿತ್ರವನ್ನು ವಿಜಯ್ ಕನ್ನಡಿಗ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾ ಬಗ್ಗೆ ‘ವಿಜಯವಾಣಿ’ಗೆ ಮಾಹಿತಿ ನೀಡಿದ ಅವರು, ‘ಜೋಗ ಮತ್ತು ಕಾರ್ಗಲ್ ಸುತ್ತಮುತ್ತ ನಡೆಯುವ ಕಥೆಯಿದು. ಕಾಣೆಯಾಗುವ ಸ್ನೇಹಿತರನ್ನು ಹುಡುಕುವ ಎಳೆ ಈ ಚಿತ್ರದಲ್ಲಿರಲಿದೆ. ‘ಜೋಗ 101’ ಶೀರ್ಷಿಕೆಗೂ ಕಥೆಗೂ ವಿಶಿಷ್ಟ ನಂಟಿದೆ. ಅದನ್ನು ಚಿತ್ರದಲ್ಲಿಯೇ ನೋಡಿ’ ಎನ್ನುತ್ತಾರೆ. ಚಿತ್ರಕ್ಕೆ ನಾಯಕಿಯಾಗಿ ಕಿರುತೆರೆ ನಟಿ ತೇಜಸ್ವಿನಿ ಶೇಖರ್ ಆಯ್ಕೆಯಾಗಿದ್ದಾರೆ. ‘ಒಂದೊಳ್ಳೆ ತಂಡದ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ‘ಲಾಂಗ್ ಡ್ರೖೆವ್’ ಬಳಿಕ ಇದು ನನ್ನ 2ನೇ ಚಿತ್ರ’ ಎನ್ನುತ್ತಾರೆ. ಸುನೀತ್ ಹಲಗೇರಿ ಛಾಯಾಗ್ರಹಣ, ರಂಗಕಹಳೆ ಮೋಹನ್ ಸಂಕಲನ, ಅವಿನಾಶ್ ಬಸುಟ್ಕರ್ ಸಂಗೀತ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net