ಖಾಕಿ ತೊಟ್ಟ ವಿಜಯ್​ ರಾಘವೇಂದ್ರ ... 'ಕೇಸ್​ ಆಫ್​ ಕೊಂಡಾಣ' ಹಿಂದೆ ಚಿನ್ನಾರಿ ಮುತ್ತ

Case of Kondana 2
Published on

ಬೆಂಗಳೂರು: ವಿಜಯ್​ ರಾವೇಂದ್ರ ಮತ್ತೊಮ್ಮೆ ಪೊಲೀಸ್​ ಸಮವಸ್ತ್ರ ತೊಟ್ಟಿದ್ದಾರೆ. ಈ ಹಿಂದೆ 'ಸೀತಾರಾಮ್​ ಬಿನಾಯ್​ - ಕೇಸ್​ ನಂಬರ್​ 18' ಚಿತ್ರದಲ್ಲಿ ತನಿಖಾಧಿಕಾರಿಯಾಗಿದ್ದ ಅವರು, ಈಗ "ಕೇಸ್​ ಆ್​ ಕೊಂಡಾಣ' ಬೆನ್ನತ್ತಿ ಹೊರಟಿದ್ದಾರೆ. "ಸೀತಾರಾಮ್​ ಬಿನಾಯ್​' ಚಿತ್ರವನ್ನು ನಿರ್ದೇಶಿಸಿದ್ದ ದೇವಿ ಪ್ರಸಾದ್​ ಶೆಟ್ಟಿ ಈ ಚಿತ್ರವನ್ನೂ ನಿರ್ದೇಶಿಸುತ್ತಿರುವುದು ವಿಶೇಷ.

'ಕೇಸ್​ ಆಫ್​ ಕೊಂಡಾಣ' ಚಿತ್ರದ ಮುಹೂರ್ತ ಇತ್ತೀಚೆಗೆ ಆಗಿದೆ. ಈ ಚಿತ್ರದಲ್ಲಿ ವಿಜಯ್​ ರಾವೇಂದ್ರಗೆ ನಾಯಕಿಯಾಗಿ ಭಾವನಾ ಮೆನನ್​ ನಟಿಸುತ್ತಿದ್ದು, ಅವರು ಸಹ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ದಿಯಾ' ಖ್ಯಾತಿಯ ಖುಷಿ ರವಿ ಈ ಚಿತ್ರದಲ್ಲಿ ವೈದ್ಯೆಯಾಗಿ ಅಭಿನಯಿಸುತ್ತಿದ್ದಾರೆ.

ಇಂಥದ್ದೊಂದು ಒಳ್ಳೆಯ ತಂಡ ಸಿಗುವುದೇ ಅಪರೂಪ ಎನ್ನುವ ವಿಜಯ್​ ರಾಘವೇಂದ್ರ, 'ಸೀತಾರಾಮ್​ ಬಿನಾಯ್​' ನಂತರ ಅದೇ ನಿರ್ದೇಶಕರ ಜತೆಗೆ ಚಿತ್ರ ಮಾಡುತ್ತಿದ್ದೇನೆ. ದೇವಿ ಅವರ ಶ್ರದ್ಧೆ, ಕೆಲಸದ ಬಗ್ಗೆ ಇರುವ ಪ್ರೀತಿ ನನಗೆ ಬಹಳ ಇಷ್ಟ. ಈ ತರಹದ ತಂತ್ರಜ್ಞರು ಬಹಳ ಅಪರೂಪ' ಎಂದರು.

ಈ ಚಿತ್ರವನ್ನು ದೇವಿಪ್ರಸಾದ್​ ಶೆಟ್ಟಿ, ಸಾತ್ವಿಕ್​ ಹೆಬ್ಬಾರ್​ ಮತ್ತು ಅರವಿಂದ್​ ಶೆಟ್ಟಿ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಹಿರಿಯ ಪತ್ರಕರ್ತ ಜೋಗಿ ಅವರ ಸಂಭಾಷಣೆ, ವಿಶ್ವಜಿತ್​ ರಾವ್​ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿರುವ ಈ ಚಿತ್ರದ ಚಿತ್ರೀಕರಣ ಸೆ. 28ರಿಂದ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net