'ಲೈಗರ್' ಹೀನಾಯ ಸೋಲು, 6 ಕೋಟಿ ರೂ. ಹಿಂದಿರುಗಿಸಲು ಮುಂದಾದ ನಟ ವಿಜಯ್ ದೇವರಕೊಂಡ

ligere
Published on

ಬೆಂಗಳೂರು: ಅದ್ಧೂರಿಯಾಗಿ ನಿರ್ಮಾಣಗೊಂಡು ಭಾರಿ ನಿರೀಕ್ಷೆ ಮೂಡಿಸಿಯೇ ಬಿಡುಗಡೆ ಆಗಿದ್ದ ಸಿನಿಮಾ ಲೈಗರ್​, ಬಳಿಕ ಹೀನಾಯ ಸೋಲು ಕಂಡಿದೆ. ಪರಿಣಾಮವಾಗಿ ಈಗ ನಟ ವಿಜಯ್ ದೇವರಕೊಂಡ ತಮ್ಮ ಸಂಭಾವನೆಯಲ್ಲಿ 6 ಕೋಟಿ ರೂ. ಮೊತ್ತವನ್ನು ನಿರ್ಮಾಪಕರಿಗೆ ಹಿಂದಿರುಗಿಸಲು ಮುಂದಾಗಿದ್ದಾರೆ.

ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾಗೆ ಸುಮಾರು 100 ಕೋಟಿ ರೂ. ಬಂಡವಾಳ ಹೂಡಲಾಗಿದ್ದು, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ರಮ್ಯಾಕೃಷ್ಣ, ರೋನಿತ್ ರಾಯ್ ಮುಂತಾವರು ಅಭಿನಯಿಸಿದ್ದರು. ಈ ಚಿತ್ರಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಮಾತ್ರವಲ್ಲದೆ ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹತಾ, ಹಿರೂ ಯಶ್ ಜೋಹರ್ ಬಂಡವಾಳ ಹೂಡಿದ್ದಾರೆ.

ಆದರೆ ತೆರೆಕಂಡ ಬಳಿಕ ಚಿತ್ರದ ಮೇಲಿದ್ದ ಎಲ್ಲ ನಿರೀಕ್ಷೆ ಹುಸಿಯಾಗಿದ್ದು, ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿ ಹೋಗಿವೆ. ಸಿನಿಮಾ ಹೀನಾಯ ಸೋಲು ಕಂಡಿದ್ದು, ತೀವ್ರ ಟೀಕೆಗೂ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಯಕ ನಟ ವಿಜಯ್ ದೇವರಕೊಂಡ 6 ಕೋಟಿ ರೂ. ನಿರ್ಮಾಪಕರಿಗೆ ಹಿಂದಿರುಗಿಸಲಿದ್ದಾರೆ ಎನ್ನಲಾಗಿದೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net