

ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಪ್ರೀತಿಸುತ್ತಿದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ, ಶೀಘ್ರವೇ ಮದುವೆ ಆಗುತ್ತಾರೆ ಎನ್ನುವ ಚರ್ಚೆ ಹೊಸದೇನಲ್ಲ. ಈ ಗಾಸಿಪ್ ಮಧ್ಯೆ ವಿಜಯ್ ದೇವರಕೊಂಡ ತಮ್ಮ 'ಗರ್ಲ್‌ಫ್ರೆಂಡ್' ಪರಿಚಯಿಸಿರುವುದು ಅಭಿಮಾನಿಗಳಿಗೆ ಇವರಿಬ್ಬರ ಡೇಟಿಂಗ್ ವದಂತಿ ಖಚಿತ ಎಂದೆನಿಸಿದೆ.
ಕೊಡಗಿನ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಿದ್ದಾರೆ. ಇನ್ನು ಸ್ವಲ ದಿನದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ. ಇಂಥ ಬಿರುಸಾದ ಚರ್ಚೆಯ ನಡುವೆಯೇ ವಿಜಯ್ ದೇವರಕೊಂಡ ಚಿತ್ರದ ಟೀಸರ್ ಬಿಡುಗಡೆ ವೇಳೆ ರಶ್ಮಿಕಾ ಮಂದಣ್ಣ ಅವರನ್ನು 'ಗರ್ಲ್‌ಫ್ರೆಂಡ್' ಎಂದು ಪರಿಚಯಿಸಿದ್ದಾರೆ.
ಮತ್ತೊಂದು ವಿಷ್ಯ ಏನೆಂದರೆ ವಿಜಯ್ ದೇವರಕೊಂಡ ರಿಲೀಸ್ ಮಾಡಿರುವ 'ದಿ ಗರ್ಲ್‌ಫ್ರೆಂಡ್' ಎಂಬ ತೆಲುಗು ಚಿತ್ರದ ಟೀಸರ್ ಅನ್ನು ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮೊದಲೇ ಇಬರಿಬ್ಬರ ನಡುವೆ ಲವ್ವಿಡವ್ವಿ ಸುದ್ದಿ ಎದ್ದೆದ್ದು ಕುಣಿಯುತ್ತಿರುವಾಗ 'ದಿ ಗರ್ಲ್‌ಫ್ರೆಂಡ್' ಎಂಬ ಸಿನಿಮಾ ಮಾಡಿರುವುದು, ಅದರ ಟೀಸರ್ ಅನ್ನು ನಾಯಕ ಬಿಡುಗಡೆ ಮಾಡೋದು, ನಾಯಕಿ ಶೇರ್ ಮಾಡೋದು ಅಂದ್ರೆ ಇವರಿಬ್ಬರೂ ರಿಲೇಶನ್ಶಿಪ್ನಲ್ಲಿದ್ದಾರೆ ಎಂಬಂತಿದೆ.
ವಿಜಯ್ ದೇವರಕೊಂಡ ಭಾನುವಾರ “Heartthrob @thedeverakonda will introduce #TheGirlfriend to the world #TheGirlfriendTeaser, out on December 9th at 11:07 AM. ಅಂತಾ ಬರೆದು ಪೋಸ್ಟ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅದನ್ನು ಶೇರ್ ಮಾಡಿದ್ದಷ್ಟೇಯಲ್ಲದೆ “Thankyou @thedeverakonda," ಎಂದು ಪ್ರತಿಕ್ರಿಯಿಸಿದ್ದಾರೆ.