

ಆಂಧ್ರಪ್ರದೇಶ: ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಂಡ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್, ವ್ಯಾಟ್ಸ್ಆ್ಯಪ್ ಚಾನೆಲ್ ಅನೇಕರ ಗಮನ ಸೆಳೆಯುವಲ್ಲಿ ಪ್ರಮುಖವಾಯಿತು. ಈ ಹೊಸ ವೈಶಿಷ್ಟ್ಯವನ್ನು ಸ್ವಾಗತಿಸಿದ ಬಳಕೆದಾರರು, ತಮ್ಮ ನೆಚ್ಚಿನ ಸ್ಟಾರ್ ನಟರ ಹೆಸರಿನ ಚಾನೆಲ್ ಅನ್ನು ಅಪಾರ ಸಂಖ್ಯೆಯಲ್ಲಿ ಅನುಸರಿಸಲು ಪ್ರಾರಂಭಿಸಿದ್ದಾರೆ. ಈ ಪೈಕಿ ನಟ ವಿಜಯ್ ದೇವರಕೊಂಡ ಹೊಸ ದಾಖಲೆ ಬರೆದಿದ್ದಾರೆ.
ಟಾಲಿವುಡ್ನ ಸ್ಟಾರ್ ನಟ ವಿಜಯ್ ದೇವರಕೊಂಡ ಕೂಡ ವ್ಯಾಟ್ಸ್ಆ್ಯಪ್ ಚಾನಲ್ನ ಹೊಸ ವೈಶಿಷ್ಟ್ಯಕ್ಕೆ ಹೆಜ್ಜೆಯಿಟ್ಟಿದ್ದು, ಅಧಿಕ ಸಂಖ್ಯೆಯ ಅನುಯಾಯಿಗಳನ್ನು ಹೊಂದುವ ಮುಖೇನ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ. ತಮ್ಮ ಅಧಿಕೃತ ಚಾನೆಲ್ನಲ್ಲಿ ಒಂದು ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ಗಳನ್ನು ಪಡೆದುಕೊಂಡ ಮೊದಲ ತೆಲುಗು ನಟರಾಗಿದ್ದಾರೆ. ಈ ಸಂಗತಿ ಅವರ ಅಭಿಮಾನಿಗಳಿಗೆ ಸಾಕಷ್ಟು ಸಂತಸ ತಂದಿದೆ.
ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತ್ ಪ್ರಭು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದ 'ಖುಷಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿಸಿದ ಗಳಿಕೆಯನ್ನು ಕಂಡಿತು. ಸದ್ಯ ಚಿತ್ರವು ಒಟಿಟಿಗೆ ಎಂಟ್ರಿ ಕೊಡಲಿದ್ದು, ರಿಲೀಸ್ ದಿನಾಂಕ ಕೂಡಲೇ ಈಗಾಗಲೇ ಪ್ರಕಟಗೊಂಡಿದೆ,(ಏಜೆನ್ಸೀಸ್).‘