ವಿಜಯ ದೇವರಕೊಂಡ ಚಿತ್ರದ ನಿರ್ದೇಶಕ ಕೊಟ್ಟ ವಿಳಾಸಕ್ಕೆ ಹೋದ ನಟಿಗೆ ಕಾದಿತ್ತು ಭಾರೀ ಆಘಾತ!

Actress Shalu Shamu
Published on

ಚೆನ್ನೈ: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಮತ್ತೊಬ್ಬ ನಟಿ ಶಾಲೂ ಶಾಮು ಸೇರಿಕೊಂಡಿದ್ದಾರೆ.

ನಟ ಶಿವಕಾರ್ತಿಕೇಯನ್​ ಅಭಿನಯದ ತಮಿಳಿನ ಸೂಪರ್​ ಹಿಟ್​ “ವರೂತಪದತ ವಾಲಿಬರ್ ಸಂಗಮ” ಸಿನಿಮಾದಲ್ಲಿ ನಟಿಸಿದ ಬಳಿಕ ಖ್ಯಾತಿಯನ್ನು ಹೆಚ್ಚಿಕೊಂಡಿರುವ ನಟಿ ಶಾಲೂ ಶಾಮು, ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೇಗಡಿ, ತಮಿಳುಕು ನುಮಾ ಉತ್ಸುತ್​, ಮಿಸ್ಟರ್​ ಲೋಕಲ್​ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣದಲ್ಲಿ ಶಾಲೂ ಹೆಚ್ಚು ಸದ್ದು ಮಾಡುತ್ತಿರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಶಾಲೂ, ಇನ್​ಸ್ಟಾಗ್ರಾಂನಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಯಾವಾಗಲೂ ತಮ್ಮ ಬೋಲ್ಡ್​ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿ ಏರಿಸುತ್ತಿರುತ್ತಾರೆ. ಅವರ ಇನ್​ಸ್ಟಾಗ್ರಾಂ ಪೂರ್ತಿ ಗ್ಲಾಮರಸ್​ ಫೋಟೋಗಳೇ ತುಂಬಿ ಹೋಗಿವೆ.

ಟಾಲಿವುಡ್​ ನಿರ್ದೇಶಕನಿಂದ ಆಫರ್​

ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ನಟಿ ಶಾಲೂ ಶಾಮು ತಮಗಾದ ಕಾಸ್ಟಿಂಗ್​ ಕೌಚ್​ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಟಾಲಿವುಡ್​ ಸೂಪರ್​ಸ್ಟಾರ್​ ವಿಜಯ್​ ದೇವರಕೊಂಡ ಸಿನಿಮಾದ ನಿರ್ದೇಶಕರೊಬ್ಬರು ಅವರ ಮನೆಗೆ ಆಹ್ವಾನಿಸಿದ್ದನ್ನು ಶಾಲೂ ಬಹಿರಂಪಡಿಸಿದ್ದಾರೆ. ಆದರೆ, ನಿರ್ದೇಶಕನ ಹೆಸರಾಗಲಿ ಅಥವಾ ಯಾವ ಸಿನಿಮಾ ಎಂದು ಶಾಲೂ ಶಾಮು ಬಹಿರಂಗಪಡಿಸಿಲ್ಲ.

ನಿರ್ದೇಶಕನ ಮನೆ ಎಂಬುದು ಅರ್ಥವಾಯಿತು

ಸಿನಿಮಾ ಒಂದರಲ್ಲಿ ನಟಿಸಲು ನನಗೆ ಆಫರ್​ ಮಾಡಿದರು. ಪಾತ್ರದ ಬಗ್ಗೆ ಮಾತನಾಡಲು ಅವರಿದ್ದ ಸ್ಥಳಕ್ಕೆ ಕರೆದರು. ಬರುವಾಗ ಸೀರೆಯನ್ನು ಹುಟ್ಟಿಕೊಂಡು ಬರುವಂತೆ ಹೇಳಿದರು. ಒಳ್ಳೆಯ ಅವಕಾಶ ಸಿಗಲಿದೆ ಎಂಬ ಆಸೆಯಿಂದ ಅವರು ಕೊಟ್ಟ ವಿಳಾಸಕ್ಕೆ ಸಂತೋಷವಾಗಿಯೇ ಹೋದೆ. ಒಳಗಡೆ ಹೋಗುತ್ತಿದ್ದಂತೆ ಫ್ಯಾಮಿಲಿ ಫೋಟೋ ನೋಡಿದೆ. ಅದು ನಿರ್ದೇಶಕನ ಮನೆ ಎಂಬುದು ಆ ಕ್ಷಣಕ್ಕೆ ನನಗೆ ಅರ್ಥವಾಯಿತು.

ಬೆಡ್​ರೂಮ್​ಗೆ ಕರೆದರು

ಮನೆಯವರು ಯಾರು ಕಾಣಿಸುತ್ತಿಲ್ಲ, ಎಲ್ಲರು ಎಲ್ಲಿ ಹೋದರು ಎಂದು ಪ್ರಶ್ನೆ ಮಾಡಿದೆ. ಎಲ್ಲರು ವಿದೇಶಕ್ಕೆ ಹೋಗಿದ್ದಾರೆ ಎಂದು ಹೇಳಿದರು. ಅದನ್ನು ನಾನು ನಂಬಿದೆ. ಬಳಿಕ ನನಗೆ ಒಂದು ಗ್ಲಾಸ್​ ಜ್ಯೂಸ್​ ನೀಡಿದರು. ಅದನ್ನು ಕುಡಿದು ಟೇಬಲ್​ ಮೇಲೆ ಇಟ್ಟೆ. ಈ ವೇಳೆ ಸಿನಿಮಾ ಪಾತ್ರದ ಬದಲು ಬೇರೆ ವಿಚಾರಗಳನ್ನೇ ಹೆಚ್ಚಾಗಿ ಮಾತನಾಡುತ್ತಿದ್ದರು. ಏನೋ ತಪ್ಪು ನಡೆಯುತ್ತಿದೆ ಅನಿಸಿತು. ಇದರಿಂದ ಭಯವಾಗಿ ಬೆವರಲು ಆರಂಭಿಸಿದೆ. ಇದನ್ನು ನೋಡಿದ ನಿರ್ದೇಶಕ ಬೆಡ್​ರೂಮ್​ಗೆ ಕರೆದರು. ಬೆಡ್​ರೂಮ್​ನಲ್ಲಿ ಎಸಿ ಇದೆ ಎಂದನು. ಇದರಿಂದ ಭಯಗೊಂಡು ನಾನು ಅಲ್ಲಿಂದ ಹೊರಟು ಬಂದೆ ಎಂದು ಶಾಲೂ ಶಾಮು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net