

ಬೆಂಗಳೂರು: ವಿಜಯ್ ರಾಘವೇಂದ್ರ ಹೊಸ ಶೈಲಿಯ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ. ಅದಕ್ಕೆ ಉದಾಹರಣೆ ಇತ್ತೀಚೆಗೆ ಬಿಡುಗಡೆಯಾದ ‘ಸೀತಾರಾಮ್ ಬಿನೋಯ್’. ತನಿಖೆ ಹಿನ್ನೆಲೆಯಲ್ಲಿ ಸಾಗುವ ಆ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ವಿಜಯ್ ಕಾಣಿಸಿಕೊಂಡಿದ್ದರು. ಇದೀಗ ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯ ಸಿನಿಮಾ ಒಪ್ಪಿದ್ದಾರೆ. ಅದರ ಮುಹೂರ್ತವೂ ನೆರವೇರಿದೆ. ಆ ಚಿತ್ರದ ಹೆಸರು ‘ಗ್ರೇ ಗೇಮ್್ಸ’! ಏನಿದು ‘ಗ್ರೇ ಗೇಮ್್ಸ’? ಮೊಬೈಲ್ ಗೇಮ್ ಗೀಳಿನಿಂದ ಮಕ್ಕಳ ಮನಸ್ಥಿತಿ ಹೇಗೆಲ್ಲ ಬದಲಾಗುತ್ತಿದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದಾರೆ ನಿರ್ದೇಶಕ ಗಂಗಾಧರ್ ಸಾಲಿಮಠ.
ವಿಜಯ್ ರಾಘವೇಂದ್ರ ಅವರಿಗಿಲ್ಲಿ ಮನೋವೈದ್ಯನ ಪಾತ್ರ. ಸೈಬರ್ ಕ್ರೖೆಂ ವಿಭಾಗದ ಪೊಲೀಸ್ ಅಧಿಕಾರಿಯಾಗಿ ಭಾವನಾ ರಾವ್ ನಟಿಸಲಿದ್ದಾರೆ. ವಿಜಯ್ ಅವರ ಅಕ್ಕನ ಮಗ ಜೈ ನಟಿಸುತ್ತಿದ್ದರೆ, ಅವರ ತಾಯಿಯ ಪಾತ್ರದಲ್ಲಿ ಅಪರ್ಣಾ ಕಾಣಿಸಿಕೊಳ್ಳುತ್ತಿದ್ದಾರೆ. ವರುಣ್ ಛಾಯಾಗ್ರಹಣ, ಶ್ರೀಯಾನ್ಶ್ ಶ್ರೀರಾಮ್ ಮತ್ತು ಡೋಲೇಶ್ವರ ರಾಜ್ ಸಂಗೀತ ನೀಡುತ್ತಿದ್ದಾರೆ. ಕಥೆ ಬರೆಯುವದರ ಜತೆಗೆ ಚಿತ್ರ ನಿರ್ವಿುಸುತ್ತಿದ್ದಾರೆ ಆನಂದ್ ಎಚ್ ಮಗದ್. ಮುಹೂರ್ತಕ್ಕೆ ನಿರ್ವಪಕ ಚಿನ್ನೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ, ಬಿ.ಕೆ. ಶಿವರಾಂ, ಶ್ರೀಮುರಳಿ ಅತಿಥಿಯಾಗಿ ಆಗಮಿಸಿ ಶುಭಕೋರಿದ್ದಾರೆ.