ಮಗಳು ಕೊನೆಯ ಬಾರಿ ಧರಿಸಿದ್ದ ವಾಚ್, ಚಪ್ಪಲಿ ಧರಿಸುವುದನ್ನೇ ಬಿಟ್ಟ ನಟ ವಿಜಯ್ ಆಂಟನಿ; ತಂದೆ-ಮಗಳ ಬಾಂಧವ್ಯದ ಬಗ್ಗೆ ಪತ್ನಿ ಫಾತಿಮಾ ಹೇಳಿದ್ದಿಷ್ಟು..Vijay Antony

ಮಗಳು ಕೊನೆಯ ಬಾರಿ ಧರಿಸಿದ್ದ ವಾಚ್, ಚಪ್ಪಲಿ ಧರಿಸುವುದನ್ನೇ ಬಿಟ್ಟ ನಟ ವಿಜಯ್ ಆಂಟನಿ; ತಂದೆ-ಮಗಳ ಬಾಂಧವ್ಯದ ಬಗ್ಗೆ ಪತ್ನಿ ಫಾತಿಮಾ ಹೇಳಿದ್ದಿಷ್ಟು..Vijay Antony
Published on: 
  • ಮಗಳು ಮೀರಾ ಕೊನೆಯ ಬಾರಿ ಧರಿಸಿದ್ದ ವಾಚ್‌ ಅನ್ನೇ ವಿಜಯ್ ಆಂಟನಿ ಬಳಸುತ್ತಿದ್ದಾರೆ.

  • ಮಗಳು ಮೀರಾ ನಿಧನದ ಬಳಿಕ ಚಪ್ಪಲಿ ಧರಿಸುವುದನ್ನೇ ನಿಲ್ಲಿಸಿದ ವಿಜಯ್ ಆಂಟನಿ.

  • 'ಅಪ್ಪ ಕುಟ್ಟಿ' ವೇದಿಕೆಯಲ್ಲಿ ಪತ್ನಿ ಫಾತಿಮಾ ಭಾವುಕ ಮಾತು ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್.

Vijay Antony wife Fatima gets emotional at 'Appa Kutty' event,: ನಟ ಮತ್ತು ಸಂಗೀತ ನಿರ್ದೇಶಕ ವಿಜಯ್​ ಆಂಟನಿ ಅವರು ತಮ್ಮ ಹಿರಿಯ ಮಗಳು ಮೀರಾ 2023 ಸೆಪ್ಟೆಂಬರ್ 19ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳು ಮೀರಾ ಅಗಲಿ ಮೂರು ವರ್ಷ ಕಳೆದರೂ, ವಿಜಯ್ ಆಂಟನಿ ಇನ್ನೂ ಆ ನೆನಪಿನಿಂದ ಹೊರಬಂದಿಲ್ಲ. ಅವರು ಧರಿಸುವ ವಾಚ್, ಕಾಲಿಗೆ ಚಪ್ಪಲಿ ಇಲ್ಲದೆ ಓಡಾಡುವ ಅಭ್ಯಾಸವೇ ಅದಕ್ಕೆ ಸಾಕ್ಷಿ.

ಹೌದು..ವಿಜಯ್ ಆಂಟನಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಮು. ಮಾರನ್ ನಿರ್ದೇಶನದ ತಮಿಳು ಫ್ಯಾಮಿಲಿ, ಆಕ್ಷನ್ ಮತ್ತು ಥ್ರಿಲ್ಲರ್ ಚಲನಚಿತ್ರ ಅಪ್ಪ ಕುಟ್ಟಿ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಗಳ ಅಗಲಿಕೆ ನಂತರ ಇದನ್ನು ಭರಿಸುತ್ತಿರುವ ರೀತಿ ಬಗ್ಗೆ ವಿಜಯ್​ ಆಂಟನಿ ಪತ್ನಿ ಫಾತಿಮಾ ಮಾತನಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಪ್ಪ-ಮಗಳ ಬಾಂಧವ್ಯದ ಬಗ್ಗೆ ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಚಪ್ಪಲಿ ಧರಿಸಲ್ಲ

'ವರ್ಷಗಳ ಕಾಲ ನಾವು ಮೀರಾಳಿಗಾಗಿ ಹಲವು ಜೊತೆ ಚಪ್ಪಲಿಗಳು ಮತ್ತು ಶೂಗಳನ್ನು ಖರೀದಿಸಿದ್ದೆವು. ಅವು ಎಷ್ಟೊಂದು ಸಂಖ್ಯೆಯಲ್ಲಿವೆ ಎಂದರೆ, ನಮ್ಮ ಮನೆಯ ಒಂದು ಇಡೀ ಕೋಣೆಯೇ ಅವುಗಳಿಂದ ತುಂಬಿದೆ.. ಅದನ್ನು ನೋಡಿದ ನಂತರ ಅವರು ಚಪ್ಪಲಿ ಹಾಕೋದನ್ನೇ ಬಿಟ್ಟುಬಿಟ್ಟರು. ಈಗ ಕೇವಲ ಕೆಲವು ಕಾರ್ಯಕ್ರಮಗಳಿಗಾಗಿ ಮಾತ್ರ ಅವರು ಶೂ ಧರಿಸುತ್ತಾರೆ. ಅವರ ಬಳಿ ಅನೇಕ ದುಬಾರಿ ವಾಚ್‌ಗಳಿದ್ದರೂ ಬಳಕೆ ಮಾಡೋದಿಲ್ಲ ಮೀರಾಳನ್ನು ಕೊನೆಯ ಬಾರಿ ನೋಡಿದಾಗ ಆಕೆಯ ಕೈಯಲ್ಲಿದ್ದ ವಾಚ್​ ಅನ್ನೇ ಈಗಲು ಧರಿಸುತ್ತಿದ್ದಾರೆ. ಇದು ಯಾರಿಗೂ ತಿಳಿದಿಲ್ಲ' ಎಂದು 'ಅಪ್ಪ ಕುಟ್ಟಿ' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವರ ಪತ್ನಿ ಫಾತಿಮಾ ಹಂಚಿಕೊಂಡಿದ್ದಾರೆ.

Also Read
ಚಿತ್ರರಂಗ ಮಾತ್ರವಲ್ಲ ಚೆನ್ನೈ ಮಹಾನಗರವನ್ನೇ ತೊರೆಯಲು ವಿಜಯ್​ ಆಂಟನಿ ನಿರ್ಧಾರ: ಕಾರಣ ಕೇಳಿದ್ರೆ ಹುಬ್ಬೇರೋದು ಖಚಿತ! Vijay Antony
ಮಗಳು ಕೊನೆಯ ಬಾರಿ ಧರಿಸಿದ್ದ ವಾಚ್, ಚಪ್ಪಲಿ ಧರಿಸುವುದನ್ನೇ ಬಿಟ್ಟ ನಟ ವಿಜಯ್ ಆಂಟನಿ; ತಂದೆ-ಮಗಳ ಬಾಂಧವ್ಯದ ಬಗ್ಗೆ ಪತ್ನಿ ಫಾತಿಮಾ ಹೇಳಿದ್ದಿಷ್ಟು..Vijay Antony

ಮೀರಾ ನಿಧನದ ಬಳಿಕ ಎಲ್ಲ ಸಿನಿಮಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾಗಿ ತಿಳಿಸಿದ ಅವರು, 'ಮೀರಾ ನಮ್ಮನ್ನಗಲಿದ ನಂತರ ನಾನು ಯಾವುದೇ ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ನಾನು ಐದು ವರ್ಷಗಳ ನಂತರ ಮತ್ತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದೇನೆ' ಎಂದು ಫಾತಿಮಾ ಹೇಳಿದರು.

ಅಪ್ಪನ ಪ್ರೀತಿ ಕೊಟ್ಟಿದ್ದು ಆಂಟನಿ

ತಮ್ಮ ಪತಿಯೊಂದಿಗಿನ ಭಾವನಾತ್ಮಕ ಬಾಂಧವ್ಯದ ಬಗ್ಗೆಯೂ ಫಾತಿಮಾ ಮಾತನಾಡಿ. ನನಗೆ ಏಳು ವರ್ಷ ವಯಸ್ಸಿದ್ದಾಗ ನನ್ನ ತಂದೆ ನನ್ನನ್ನು ಮತ್ತು ನನ್ನ ಕಿರಿಯ ಸಹೋದರಿಯನ್ನು ಬಿಟ್ಟು ಹೋದರು. ಆ ತಂದೆಯ ಪ್ರೀತಿಯನ್ನು ನನಗೆ ನೀಡಿದ ವ್ಯಕ್ತಿ ವಿಜಯ್ ಆಂಟನಿ ಎಂದರು, ಕಾರ್ಯಕ್ರಮಕ್ಕೆ ಅವರ ಕಿರಿಯ ಮಗಳು ಲಾರಾ ಬಂದಿದ್ದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ಆಂಟನಿ, 'ನೀವು ಈ ಸಿನಿಮಾವನ್ನು ನಿಮ್ಮ ಕುಟುಂಬದೊಂದಿಗೆ ನೋಡಬಹುದು. ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಬಂದಾಗ, ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ತಂದೆಗೆ ಕರೆ ಮಾಡಿ ಮಾತನಾಡಬೇಕು ಎನಿಸುತ್ತದೆ. ತಂದೆ-ಮಗಳ ಸಂಬಂಧದ ಸುತ್ತ ಈ ಸಿನಿಮಾ ಕಟ್ಟಿಕೊಡಲಾಗಿದೆ' ಎಂದು ಹೇಳಿದರು.

ವಿಜಯ್ ಆಂಟನಿ ಮತ್ತು ಪ್ರೀತಿ ಅಸ್ರಾನಿ ನಟಿಸಿರುವ 'ಅಪ್ಪ ಕುಟ್ಟಿ' ಚಿತ್ರವನ್ನು ಮು ಮಾರನ್ ನಿರ್ದೇಶಿಸಿದ್ದು, ಇದು ತಂದೆ ಮತ್ತು ಮಗಳ ನಡುವಿನ ಬಾಂಧವ್ಯದ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಬೇಬಿ ಲಿಥನ್ಯಾ, ಭಗವತಿ ಪೆರುಮಾಳ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರವು ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ, (ಏಜೆನ್ಸೀಸ್).