ಡಿ. 22ಕ್ಕೆ ಸೈಂಧವ ; ವಿಕ್ಟರಿ ವೆಂಕಟೇಶ್​, ಶ್ರದ್ಧಾ ಶ್ರೀನಾಥ್​ ನಟಿಸಿರುವ ಪ್ಯಾನ್​ ಇಂಡಿಯಾ ಚಿತ್ರ

Shraddha Srinath (12)
Published on

ತೆಲುಗು ನಟ ವಿಕ್ಟರಿ ವೆಂಕಟೇಶ್​ ಅಭಿನಯದ 75ನೇ ಚಿತ್ರ "ಸೈಂಧವ'. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ "ಹಿಟ್​' ಸರಣಿಯ ಶೈಲೇಶ್​ ಕೊಲನು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಚಿತ್ರದಲ್ಲಿ ವೆಂಕಟೇಶ್​ಗೆ ನಾಯಕಿಯಾಗಿ "ಯೂರ್ಟನ್​', "ಆಪರೇಷನ್​ ಅಲಮೇಲಮ್ಮ' ಖ್ಯಾತಿಯ ಕನ್ನಡದ ನಟಿ ಸದ್ಯ ಟಾಲಿವುಡ್​ನಲ್ಲಿ ಬಿಜಿಯಿರುವ ಶ್ರದ್ಧಾ ಶ್ರೀನಾಥ್​ ಅಭಿನಯಿಸುತ್ತಿದ್ದಾರೆ. ಮನೋಜ್ಞಾ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗಷ್ಟೆ ದಕ್ಷಿಣ ಭಾರತದ ಹೆಸರಾಂತ ಸಾಹಸ ನಿರ್ದೇಶಕರಾದ ರಾಮ-ಲಕ್ಷ್ಮಣ ಜೋಡಿಯ ಸಾಹಸ ನಿರ್ದೇಶನದಲ್ಲಿ 18 ದಿನಗಳ ಕಾಲ ಚಿತ್ರದ ಕ್ಲೆಮ್ಯಾಕ್ಸ್​ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದ ಮೂಲಕ ಬಾಲಿವುಡ್​ ನಟ ನವಾಜುದ್ದಿನ್​ ಸಿದ್ದಿಕಿ ಟಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ವೆಂಕಟೇಶ್​, ಶ್ರದ್ಧಾ, ನವಾಜುದ್ದಿನ್​ ಜತೆ ರುಹಾನಿ ಶರ್ಮಾ, ಆಂಡ್ರಿಯಾ ಜೆರಿಮಿಯಾ, ಸಾರಾ ಮತ್ತು ಜಯಪ್ರಕಾಶ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಸಂತೋಷ್​ ನಾರಾಯಣನ್​ ಸಂಗೀತ, ಮಣಿಕಂದನ್​ ಛಾಯಾಗ್ರಹಣ, ಗ್ಯಾರಿ ಸಂಕಲನವಿರಲಿದೆ. "ಸೈಂಧವ' ಇದೇ ಡಿ. 22ರಂದು ವಿಶ್ವಾದ್ಯಂತ ರಿಲೀಸ್​ ಆಗಲಿದೆ.


-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net