

ಉರಿ ಸಿನಿಮಾ ಹಿಟ್ ಆದ ಬಳಿಕ ನಟ ವಿಕ್ಕಿ ಕೌಶಾಲ್ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದು ಗೊತ್ತೇ ಇದೆ. ಅದಾದ ಬಳಿಕ ಹಲವು ಬಿಗ್ ಪ್ರಾಜೆಕ್ಟ್ಗಳಲ್ಲಿ ಅವರ ಹೆಸರು ಕೇಳಿ ಬಂದಿತ್ತಾದರೂ ಯಾವುದೂ ಅಧಿಕೃತವಾಗಿರಲಿಲ್ಲ. ಇದೀಗ ಲಾಕ್ಡೌನ್ ಹೊತ್ತಲ್ಲೇ ದೊಡ್ಡ ಸುದ್ದಿಯೊಂದಿಗೆ ಬಂದಿದ್ದಾರೆ ವಿಕ್ಕಿ ಕೌಶಾಲ್.
ಇದನ್ನೂ ಓದಿ: ಸೈಫ್ ಅಲಿ ಖಾನ್ ಪದೇಪದೇ ಮನೆಯಿಂದ ಹೊರಬರುವುದು ಏಕೆ?
ಅಂದರೆ, ಬಾಲಿವುಡ್ನ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ಸಿದ್ಧವಾಗಲಿರುವ ಬಿಗ್ ಬಜೆಟ್ನ ಚಿತ್ರದಲ್ಲಿ ವಿಕ್ಕಿ ನಾಯಕನಾಗಿ ನಟಿಸಲಿರುವುದು ಅಧಿಕೃತವಾಗಿದ್ದು, ಧೂಮ್ 3, ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ ಖ್ಯಾತಿನ ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ಈ ಬಿಗ್ ಪ್ರಾಜೆಕ್ಟ್ನ ಜವಾಬ್ದಾರಿ ಹೊತ್ತಿದ್ದಾರೆ.
ಈಗಾಗಲೇ ಸಿನಿಮಾದ ಕಥೆ ಲಾಕ್ ಆಗಿದ್ದು, ಆ್ಯಕ್ಷನ್ ಓರಿಯೆಂಟೆಡ್ ಆಗಿರಲಿದ್ದು, ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ವಿಕ್ಕಿ ಕಾಣಿಸಿಕೊಳ್ಳಲಿದ್ದು, ಲಾಕ್ಡೌನ್ ಮುಗಿಯುತ್ತಿದ್ದಂತೆ ಅಕ್ಟೋಬರ್ ವೇಳೆಗೆ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ಶೂಜಿತ್ ಸಿರ್ಕಾರ್, ಮೇಘನಾ ಗುಲ್ಜಾರ್ ಸೇರಿ ಹಲವರು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್)