CHAAVA Review; ಸಿಂಹದ ಮರಿಯಾಗಿ ವಿಕ್ಕಿ ಕೌಶಲ್​ ಗರ್ಜನೆ

asc
Published on

ಚಿತ್ರ: ಛಾವಾ

ನಿರ್ದೇಶನ: ಲಕ್ಷ್ಮಣ ರಾಮಚಂದ್ರ ಉತೇಕರ್​

ನಿರ್ಮಾಣ: ಮ್ಯಾಡಾಕ್​ ಫಿಲಂಸ್​

ತಾರಾಗಣ: ವಿಕ್ಕಿ ಕೌಶಲ್​, ರಶ್ಮಿಕಾ ಮಂದಣ್ಣ, ಅಕ್ಷಯ್​ ಖನ್ನಾ, ಬಾಲಾಜಿ ಮನೋಹರ್​, ಅಶುತೋಷ್​ ರಾಣಾ, ಡಯಾನಾ ಪೆಂಟಿ, ದಿವ್ಯಾ ದತ್ತಾ ಮತ್ತಿತರರು.

| ಹರ್ಷವರ್ಧನ್​ ಬ್ಯಾಡನೂರು

ಛತ್ರಪತಿ ಶಿವಾಜಿ ಮಾಹಾರಾಜರ ನಿಧನದ ಬಳಿಕ ಮರಾಠರು ಅನಾಥರಾಗಿದ್ದಾರೆ. ಇನ್ನು ಹಿಂದುಸ್ತಾನದಲ್ಲಿ ಮೊಲರಿಗೆ ಯಾರಿಂದಲೂ ತೊಂದರೆಯಿಲ್ಲ ಎಂದು ಔರಂಗಜೇಬನು ಸಂಭ್ರಮಿಸುತ್ತಿರುವ ಹೊತ್ತಲ್ಲೇ 24 ವರ್ಷದ ಯುವಕನೊಬ್ಬ ಮೊಲರ ಆಳ್ವಿಕೆಯಿದ್ದ ಬುರ್ಹಾನ್​ಪುರವನ್ನು ವಶಪಡಿಸಿಕೊಳ್ಳುತ್ತಾನೆ. ಆಗ ಅವರಿಗೆ "ಡೆಕ್ಕನ್​ನಿಂದ ಎದ್ದುಬಂದ ಬಿರುಗಾಳಿಯ ಹೆಸರು ಸಂಭಾಜಿ ಭೋಸ್ಲೆ (ವಿಕ್ಕಿ ಕೌಶಲ್​)' ಎಂದು ತಿಳಿಯುತ್ತದೆ. ತಂದೆ ಛತ್ರಪತಿ ಶಿವಾಜಿ ಮಹಾರಾಜರ "ಹಿಂದವೀ ಸ್ವರಾಜ್ಯ'ದ ಕನಸನ್ನು ನನಸು ಮಾಡಲು ಹೊರಟ ಮಗ ಸಂಭಾಜಿ ಕಥೆಯಿದು. ಪದೇಪದೆ ಮೊಲರ ಮೇಲೆ ದಾಳಿ ಮಾಡುತ್ತಾ ಸಂಭಾಜಿ, ಔರಂಗಜೇಬನ ನಿದ್ರೆಗೆಡಿಸುತ್ತಾನೆ. 8 ಲಕ್ಷ ಸೈನಿಕರು, 50 ಸಾವಿರ ಅಶ್ವದಳ, 30 ಸಾವಿರ ಆನೆಗಳೊಂದಿಗೆ ಕೇವಲ 25 ಸಾವಿರ ಸೈನಿಕರಿದ್ದ ಸಂಭಾಜಿ ಮೇಲೆ ಔರಂಗಜೇಬನು ಯುದ್ಧ ಸಾರುತ್ತಾನೆ. ಸುಮಾರು ಒಂಬತ್ತು ವರ್ಷಗಳ ಕಾಲ ಆತನಿಗಾಗಿ ಹುಡುಕಾಟ ನಡೆಸುತ್ತಾನೆ.

ಗೆರಿಲ್ಲಾ ತಂತ್ರಗಳ ಮೂಲಕ ಕಾಡು, ಹೊಲ, ಮಳೆ, ಬಿಸಿಲೆನ್ನದೆ ಮೊಲರ ಸೈನ್ಯದ ಮೇಲೆ ದಾಳಿಯಿಡುವ ಸಂಭಾಜಿ, ಕನಸ್ಸಿನಲ್ಲೂ ಔರಂಗಜೇಬನನ್ನು ಕಾಡುತ್ತಾನೆ. ಮರಾಠರ ಜತೆಗಿದ್ದ ಕಾಣೋಜಿ ಮತ್ತು ಗಾನೋಜಿ ಮೊಲರ ಜತೆ ಕೈಜೋಡಿಸಿ, ಸಂಭಾಜಿ ಬೆನ್ನಿಗೆ ಚೂರಿ ಹಾಕುತ್ತಾರೆ. ಸಂಭಾಜಿ ಮೊಲ್​ ಸೇನೆಗೆ ಸಿಕ್ಕೀಬಿಳುತ್ತಾರೆ. ಔರಂಗಜೇಬನು ಇಸ್ಲಾಂಗೆ ಮತಾಂತರವಾದರೆ, ಜೀವದಾನ ನೀಡುವುದಾಗಿ ಸಂಭಾಜಿಗೆ ಹೇಳುತ್ತಾನೆ. ಅದಕ್ಕೆ ಒಪ್ಪದಿದ್ದಾಗ ಅವರನ್ನು ಕಟ್ಟಿಹಾಕಿ, ಕೈಕಾಲುಗಳ ಉಗುರು ಕೀಳಲಾಗುತ್ತದೆ. ನಾಲಗೆ ಕತ್ತರಿಸಿ, ಯುದ್ಧದ ಸಂದರ್ಭದಲ್ಲಿ ಆಗಿದ್ದ ಗಾಯಗಳಿಗೆ ಉಪು$್ಪ ಸವರಲಾಗುತ್ತದೆ. ಕಾದ ಸಲಾಕೆಗಳಿಂದ ಕಣ್ಣುಗಳನ್ನು ಸುಡಲಾಗುತ್ತದೆ. ಆದರೆ, ಹಿಂದವೀ ಸ್ವರಾಜ್ಯದ ಕನಸು ಕಂಡ "ಛಾವಾ' (ಸಿಂಹದ ಮರಿ) ಯಾವುದಕ್ಕೂ ಮಣಿಯುವುದಿಲ್ಲ...

ವಿಕ್ಕಿ ಕೌಶಲ್​ ಈಗಾಗಲೇ ವಿಭಿನ್ನ ಪಾತ್ರಗಳ ಮೂಲಕ ಉತ್ತಮ ನಟ ಎಂಬುದನ್ನು ನಿರೂಪಿಸಿದ್ದಾರೆ. "ಛಾವಾ'ದಲ್ಲಿ ಬಹುಶ@ ಸಂಭಾಜಿ ಹೀಗೇ ಇದ್ದರೇನೋ? ಎಂಬಷ್ಟು ಅದ್ಭುತವಾಗಿ ಅವರ ಅಭಿನಯ ಮೂಡಿಬಂದಿದೆ. ಒನ್​ ಮ್ಯಾನ್​ ಆರ್ಮಿಯಂತೆ ಚಿತ್ರವನ್ನು ಹೆಗಲ ಮೇಲೆ ಹೊತ್ತೊಯ್ದಿದ್ದಾರೆ ವಿಕ್ಕಿ. ಸಂಭಾಜಿ ಪತ್ನಿ ಯೆಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಡಬ್ಬಿಂಗ್​ ಮತ್ತು ನಟನೆಯಿಲ್ಲ ಕೊರತೆ ಕಾಣಿಸುತ್ತದೆ. ಔರಂಗಜೇಬನಾಗಿ ಅಕ್ಷಯ್​ ಖನ್ನಾ ಮೌನದಲ್ಲೇ ಕ್ರೌರ್ಯ ವ್ಯಕ್ತಪಡಿಸುತ್ತಾರೆ. ಕನ್ನಡಿಗ ಬಾಲಾಜಿ ಮನೋಹರ್​ ಮ್ಹಲೋಜಿ ಬಾಬಾಆಗಿ ಗಮನ ಸೆಳೆಯುತ್ತಾರೆ. ನಿರ್ದೇಶಕ ಲಕ್ಷ್ಮಣ ಉತೇಕರ್​ ಇಲ್ಲಿ ಹೆಚ್ಚು ಆ್ಯಕ್ಷನ್​ ಸನ್ನಿವೇಶಗಳಿಗೆ ಮಹತ್ವ ನೀಡಿದಂತಿದೆ. ಎ.ಆರ್​.ರೆಹಮಾನ್​ ಹಿನ್ನೆಲೆ ಸಂಗೀತದಲ್ಲಿ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಅವಕಾಶವಿತ್ತು. ಆದರೆ, ಅವರು ಆ ಅವಕಾಶವನ್ನು ಉಪಯೋಗಿಸಿಕೊಂಡಿಲ್ಲ. ಈ ಸಿನಿಮಾ ನೋಡಿದ ಬಳಿಕ ಮೊಲರು, ಬ್ರಿಟಿಷರ ಬಗ್ಗೆ ಶಾಲೆ, ಕಾಲೇಜು ಪಠ್ಯಗಳಲ್ಲಿ ಓದಿರುವ ನಾವು ಸಂಭಾಜಿಯಂತಹ ವೀರರ ಬಗ್ಗೆ ಯಾಕೆ ಪಠ್ಯಗಳಲ್ಲಿ ಓದಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net