ಜಯಂತಿ ಆರೋಗ್ಯದಲ್ಲಿ ಚೇತರಿಕೆ

Final - Jayanthi
Published on

ಇತ್ತೀಚೆಗಷ್ಟೇ ಅಸ್ತಮಾ ಹೆಚ್ಚಾದ ಕಾರಣ ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟಿ ಜಯಂತಿ ಅವರ ಆರೋಗ್ಯದಲ್ಲಿ ಚೇತರಿಗೆ ಕಂಡು ಬಂದಿದ್ದು, ಅವರನ್ನು ಇನ್ನೂ ಎರಡು ದಿನಗಳ ಕಾಲ ಅವರನ್ನು ಅಬ್ಸರ್ವೇಶನ್‍ನಲ್ಲಿ ಇಡಲಾಗಿದೆ.

ಈ ಕುರಿತು `ವಿಜಯವಾಣಿ' ಜತೆಗೆ ಮಾತನಾಡಿದ ಜಯಂತಿ ಅವರ ಮಗ ಕೃಷ್ಣಕುಮಾರ್, `ಅಮ್ಮನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಇಂದು ಮಧ್ಯಾಹ್ನ ತೆಗೆಯಲಾಗಿದೆ. ಅವರಿನ್ನೂ ಐಸಿಯೂನಲ್ಲೇ ಇದ್ದಾರೆ. ಇನ್ನೂ ಎರಡು ದಿನಗಳ ಕಾಲ ಅವರನ್ನು ಅಬ್ಸವೇರ್ಶನ್‍ನಲ್ಲೇ ಇಡಲಾಗುತ್ತದೆ' ಎಂದು ಕೃಷ್ಣಕುಮಾರ್ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿರುವ ಜಯಂತಿ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ಕಮಲಾಪುರದಲ್ಲಿ ಸಿಲುಕಿದ್ದರು. 50ಕ್ಕೂ ಹೆಚ್ಚು ದಿನಗಳು ಅವರು ಅಲ್ಲಿದ್ದಿದ್ದರಿಂದ, ವೈದ್ಯರ ಸಲಹೆಯ ಮೇರೆಗೆ ಮೇ ತಿಂಗಳಲ್ಲಿ ಅವರನ್ನು ಬೆಂಗಳೂರಿಗೆ ಕರೆತರಲಾಗಿತ್ತು.

ಬೆಂಗಳೂರಿಗೆ ವಾಪಸ್ಸಾದ ನಂತರ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯಕರವಾಗಿದ್ದ ಅವರಿಗೆ, ಎರಡು ದಿನಗಳ ಹಿಂದೆ ಅಸ್ತಮಾ ಹೆಚ್ಚಾಗಿತ್ತು. ಆ ಕಾರಣದಿಂದ ಅವರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರುವುದರಿಂದ, ವೆಂಟಿಲೇಟರ್ ತೆಗೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net