ಗೋದ್ರಾದಲ್ಲಿ ಸೋನುಗೆ ಮಹತ್ವವಾದ ವಿಶೇಷ ಪಾತ್ರ

Sonu
Published on

ಬೆಂಗಳೂರು: ಸದ್ಯ ಸದ್ದು ಮಾಡುತ್ತಿರುವ ‘ಗೋದ್ರಾ’ ಚಿತ್ರದ ಪಾತ್ರವರ್ಗದಲ್ಲಿ ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್, ವಸಿಷ್ಠ ಸಿಂಹ, ರಕ್ಷಾ ಸೋಮಶೇಖರ್ ಮಾತ್ರವಲ್ಲ, ನಟಿ ಸೋನು ಗೌಡ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದಲ್ಲಿ ಅವರದ್ದು ಅತಿಥಿ ಪಾತ್ರವಾದರೂ ಅದು ವಿಶೇಷ ಪಾತ್ರವಾಗಿರುವುದರಿಂದ ಚಿತ್ರದುದ್ದಕ್ಕೂ ದರ್ಶನ ನೀಡಲಿದ್ದಾರಂತೆ.

ಅಂದಹಾಗೆ ಈ ಚಿತ್ರದಲ್ಲಿ ಅವರು ನಟ ಅಚ್ಯುತ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ‘ರಾಜಕಾರಣಿಯಾಗಿ ನಟಿಸಿರುವ ಅಚ್ಯುತ್ ಕುಮಾರ್ ಅವರನ್ನು ಬದಲಾಯಿಸುವ ಒಂದು ಪ್ರಮುಖ ಪಾತ್ರದಲ್ಲಿ ಸೋನು ಗೌಡ ನಟಿಸಿದ್ದಾರೆ’ ಎನ್ನುವ ನಿರ್ದೇಶಕ ಕೆ.ಎಸ್. ನಂದೀಶ್, ಸೋನು ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯ ಗುಟ್ಟಾಗಿಯೇ ಇಡಲು ಬಯಸುತ್ತಾರೆ.

‘ಜಾಕೊಬ್ ಫಿಲಮ್್ಸ’ ಹಾಗೂ ‘ಲೀಡರ್ ಫಿಲಮ್ ಪ್ರೊಡಕ್ಷನ್ಸ್’ ಜಂಟಿಯಾಗಿ ನಿರ್ವಿುಸಿರುವ ಈ ಚಿತ್ರವನ್ನು ಕೆಲವು ನೈಜ ಘಟನೆಗಳನ್ನು ಆಧರಿಸಿ ನಿರ್ವಿುಸಲಾಗಿದೆ ಎಂಬುದನ್ನು ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಟೀಸರ್ ತಿಳಿಸುತ್ತದೆ. ನಾಯಕ ನೀನಾಸಂ ಸತೀಶ್, ನಾಯಕಿ ಶ್ರದ್ಧಾ ಶ್ರೀನಾಥ್ ಇಬ್ಬರೂ ಪತ್ರಿಕೋದ್ಯಮ ವಿದ್ಯಾರ್ಥಿಗಳಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಈ ಚಿತ್ರದಲ್ಲಿ ವಸಿಷ್ಠ ಸಿಂಹ ತಮ್ಮ ಎಂದಿನ ನೆಗೆಟಿವ್ ಶೇಡ್​ಗೆ ಬದಲಾಗಿ ಪಾಸಿಟಿವ್ ರೋಲ್​ನಲ್ಲಿ ನಟಿಸಿದ್ದಾರೆ. ಬಾಕಿ ಇರುವ ಕೆಲವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ ಮಾರ್ಚ್-ಏಪ್ರಿಲ್​ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net