ಶರ್ವಿುಳಾ ಕೈಯಲ್ಲಿ ವೀಣೆ: ವರಮಹಾಲಕ್ಷ್ಮೀ ಹಬ್ಬಕ್ಕಾಗಿ ವಿಶೇಷ ಫೋಟೋಶೂಟ್

Sharmila
Published on

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರು ಸೋಷಿಯಲ್ ಮೀಡಿಯಾ ಮೂಲಕ ನಾಡಿನ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಹಲವು ನಟಿಯರು ಸಾಂಪ್ರದಾಯಿಕ ಉಡುಗೆಗಳಲ್ಲಿರುವ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಈ ಬಾರಿ ಶರ್ವಿುಳಾ ಮಾಂಡ್ರೆ, ವರಮಹಾಲಕ್ಷ್ಮೀ ಹಬ್ಬಕ್ಕೆಂದೇ ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿರುವ ಶರ್ವಿುಳಾ ಮಾಂಡ್ರೆ, ‘ವರಮಹಾಲಕ್ಷ್ಮೀ ಹಬ್ಬಕ್ಕೆ ಸಾಮಾನ್ಯವಾಗಿ ಮನೆಯಲ್ಲಿ ಪೂಜೆ ಮಾಡಿ, ಆ ಫೋಟೋಗಳನ್ನೇ ಹಂಚಿಕೊಳ್ಳುತ್ತಿದ್ದೆ. ಕೆಲವರು ಹಬ್ಬದ ವಿಶೇಷ ಫೋಟೋಗಳೇನಾದರೂ ಇವೆಯಾ ಎಂದು ಪ್ರತೀವರ್ಷ ಕೇಳುತ್ತಿದ್ದರು. ಅದೇ ಕಾರಣಕ್ಕೆ ಈ ಬಾರಿ ಫೋಟೋಶೂಟ್ ಮಾಡಿಸೋಣ ಎಂದುಕೊಂಡೆ. ನನ್ನ ಫೋಟೋಶೂಟ್ ಮಾಡುವ ರಾಘವ್ ಮತ್ತು ಪ್ರಶಾಂತ್ ಒಂದಿಷ್ಟು ರೆಫರೆನ್ಸ್ ಫೋಟೋಗಳನ್ನು ಕಳಿಸಿದ್ದರು. ಅದನ್ನೇ ಮರುಸೃಷ್ಟಿ ಮಾಡಿದ್ದೇವೆ. ಚಿಕ್ಕಬಳ್ಳಾಪುರದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ 10 ದಿನಗಳ ಹಿಂದೆ ಫೋಟೋಶೂಟ್ ಮಾಡಿದ್ದೇವೆ’ ಎಂದು ಮಾಹಿತಿ ಕೊಡುತ್ತಾರೆ ಅವರು.

ಇನ್ನು, ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಮಾತನಾಡುವ ಅವರು, ‘‘ದಸರಾ’ ಚಿತ್ರದ ಕೊನೆಯ ಹಂತದ ಶೂಟಿಂಗ್ ಮಾಡಬೇಕಿದೆ. ಬೆಂಗಳೂರಿನಲ್ಲೇ 10 ದಿನಗಳ ಕಾಲ ಚಿತ್ರೀಕರಣ ಮಾಡಿದರೆ, ಚಿತ್ರ ಮುಗಿದಂತೆ. ಸೆಪ್ಟೆಂಬರ್ 10ಕ್ಕೆ ಚಿತ್ರ ಸಂಪೂರ್ಣವಾಗಲಿದೆ. ನಂತರ ‘ಗಾಳಿಪಟ 2’ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ವರ್ಷ, ಈ ಎರಡೂ ಸಿನಿಮಾಗಳನ್ನು ಚಿತ್ರಮಂದಿರಗಳು ಅಥವಾ ಒಟಿಟಿಯಲ್ಲಿ ನೋಡುವುದಕ್ಕೆ ಇಷ್ಟಪಡುತ್ತೇನೆ’ ಎನ್ನುತ್ತಾರೆ ಶರ್ವಿುಳಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net