

ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಸಿದ್ಧವಾಗುತ್ತಿರುವ ‘ಸಲಾರ್’ ಸಿನಿಮಾ ದಿನದಿಂದ ದಿನಕ್ಕೆ ತಾರಾಬಳಗದ ವಿಚಾರದಲ್ಲಿ ಕುತೂಹಲ ಮೂಡಿಸುತ್ತಿದೆ. ಇದೀಗ ಬಾಲಿವುಡ್ ನಟಿಯ ಆಗಮನವಾಗಲಿದೆ ಎಂಬಂಥ ಸುದ್ದಿಗಳು ಹರಿದಾಡುತ್ತಿವೆ. ಸದ್ಯದ ಅಂತೆ ಕಂತೆಯ ಪ್ರಕಾರ ‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ಗೆ ದ್ವಿಪಾತ್ರ ಇದೆ. ಆ ಕಾರಣಕ್ಕೆ ಮತ್ತೊಬ್ಬ ನಾಯಕಿಯನ್ನು ಆಯ್ದುಕೊಳ್ಳಲು ತಂಡ ಪ್ಲಾನ್ ಮಾಡಿದೆಯಂತೆ.
ಈಗಾಗಲೇ ಪ್ರಭಾಸ್ಗೆ ನಟಿ ಶ್ರುತಿ ಹಾಸನ್ ಜೋಡಿಯಾಗಿದ್ದು, ಹೊಸದಾಗಿ ವಾಣಿ ಕಪೂರ್ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣಹಚ್ಚಲಿದ್ದಾರಂತೆ. ಸದ್ಯ ಈ ವಿಚಾರ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದು, ಇನ್ನಷ್ಟೇ ಅಧಿಕೃತ ಘೋಷಣೆಯಾಗಬೇಕಿದೆ. ಇನ್ನು ಎರಡು ಹಂತದ ಶೂಟಿಂಗ್ ಮುಗಿಸಿಕೊಂಡಿರುವ ನಿರ್ದೇಶಕರು, ಶೀಘ್ರದಲ್ಲಿ ಹೈದರಾಬಾದ್ನಲ್ಲಿ ಚಿತ್ರೀಕರಣ ಆರಂಭಿಸಲಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.