ಮಗನ ಚಿತ್ರಕ್ಕೆ ರವಿಮಾಮ ಆಕ್ಷನ್-ಕಟ್; ವಿಕ್ರಮ್ ಜತೆ ರವಿಚಂದ್ರನ್ ಸಹ ಸಿನಿಮಾದಲ್ಲಿರ್ತಾರೆ

page 10 4
Published on

ಬೆಂಗಳೂರು: ‘ಕ್ರೇಜಿಸ್ಟಾರ್’ ರವಿಚಂದ್ರನ್ ತಮ್ಮ ಇಬ್ಬರು ಪುತ್ರರ ಪೈಕಿ ಒಬ್ಬರಿಗಾದರೂ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು ಕಳೆದ ಹಲವು ವರ್ಷಗಳಿಂದ ಹೇಳುತ್ತಲೇ ಬರಲಾಗುತ್ತಿತ್ತು. ಆದರೆ, ಅದ್ಯಾವುದು ಈಡೇರಿರಲಿಲ್ಲ ಎಂಬುದಕ್ಕಿಂತ ಸರಿಯಾದ ಕಾಲ ಕೂಡಿಬಂದಿರಲಿಲ್ಲ. ಹಲವು ಕಥೆ ಸೃಷ್ಟಿ ಆಗಿದ್ದವಾದರೂ, ಅದ್ಯಾವುದು ಅವರಿಗೆ ತೃಪ್ತಿ ಅನಿಸಿರಲಿಲ್ಲ. ಇದೀಗ ಕಥೆ ರೆಡಿ ಮಾಡಿಕೊಂಡಿದ್ದಾರೆ ರವಿಮಾಮ. ಇನ್ನೇನು ಲಾಕ್​ಡೌನ್ ತೆರವಾಗುತ್ತಿದ್ದಂತೆ ಆ ಸಿನಿಮಾ ಬಗ್ಗೆ ಮಾಹಿತಿ ನೀಡಲಿದ್ದಾರೆ. ಹಾಗಾದರೆ ಮನುರಂಜನ್ ಮತ್ತು ವಿಕ್ರಮ್ ಇಬ್ಬರ ಪೈಕಿ ಯಾರ ಚಿತ್ರಕ್ಕೆ ರವಿಚಂದ್ರನ್ ಆಕ್ಷನ್-ಕಟ್ ಹೇಳಲಿದ್ದಾರೆ? ಅದಕ್ಕೆ ಉತ್ತರ; ಕಿರಿಮಗ ವಿಕ್ರಮ್ ಸಿನಿಮಾ ಎನ್ನುತ್ತಾರವರು.

ಲಾಕ್​ಡೌನ್​ನಲ್ಲೇ ಒಟ್ಟು ಮೂರು ಕಥೆಯನ್ನು ಸೃಷ್ಟಿಸಿರುವ ಅವರು, ಅವುಗಳಲ್ಲಿ ಒಂದು ಕಥೆಯನ್ನು ಆಯ್ದುಕೊಂಡು ವಿಕ್ರಮ್ೆ ನಿರ್ದೇಶನ ಮಾಡಲಿದ್ದಾರೆ. ಅಚ್ಚರಿ ವಿಚಾರ ಏನೆಂದರೆ, ನಿರ್ದೇಶನದ ಜತೆಗೆ ಆ ಸಿನಿಮಾದಲ್ಲಿಯೂ ನಟಿಸಲಿದ್ದಾರೆ ರವಿಚಂದ್ರನ್! ಅಪ್ಪ ಮತ್ತು ಮಗನ ಸಂಬಂಧದ ಕಥೆ ಇದಾಗಿರಲಿದ್ದು, ಚಿತ್ರಕಥೆ ಮತ್ತು ಸ್ಕ್ರೀನ್ ಪ್ಲೇ ತುಂಬ ವಿಭಿನ್ನವಾಗಿ ಇರಲಿದೆಯಂತೆ. ಸದ್ಯ ‘ರವಿ ಬೋಪಣ್ಣ’ ಸಿನಿಮಾದ ಮೇಲೆ ಗಮನ ಹರಿಸಿರುವ ಕ್ರೇಜಿಸ್ಟಾರ್, ಲಾಕ್​ಡೌನ್ ತೆರವಾಗುತ್ತಿದ್ದಂತೆ ಆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಇತ್ತ ಲಾಕ್​ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಸರಳ ಜನ್ಮದಿನ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ.

ಶುಭಾಶಯಗಳ ಸುರಿಮಳೆ: ಕ್ರೇಜಿಸ್ಟಾರ್ ಬರ್ತ್​ಡೇ ಅಂದರೆ ಕೇಳ್ಬೇಕಾ, ಇಡೀ ಸ್ಯಾಂಡಲ್​ವುಡ್​ಗೆ ಸ್ಯಾಂಡಲ್​ವುಡ್ ರವಿಮಾಮನಿಗೆ ಶುಭಾಶಯದ ಮಳೆಯನ್ನೇ ಸುರಿಸಿದೆ. ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್, ಸುದೀಪ್, ದರ್ಶನ್, ಪುನೀತ್, ಶರಣ್, ಗಣೇಶ್, ನಿಖಿಲ್ ಕುಮಾರ್, ನೆನಪಿರಲಿ ಪ್ರೇಮ್ ಜಗ್ಗೇಶ್, ಧನಂಜಯ, ವಸಿಸ್ಟ ಸಿಂಹ, ನಟಿ ಖುಷ್ಬೂ ಸೇರಿ ಹಲವರು ನೆಚ್ಚಿನ ನಟನ ಜನ್ಮದಿನಕ್ಕೆ ಹರಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net