More

    ಜೂ.1ರಿಂದ ಅಂತರ ರಾಜ್ಯ ಸಂಚಾರ ಮುಕ್ತ, ಮುಕ್ತ

    ನವದೆಹಲಿ: ಕೋವಿಡ್​-19 ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಂತರ ರಾಜ್ಯ ಮತ್ತು ಅಂತರ್​ ರಾಜ್ಯ ಜನ ಸಂಚಾರಕ್ಕೆ ಮತ್ತು ಸರಕು ಸಾಗಣೆಗೆ ಇದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ಆದೇಶ ಕಂಟೇನ್ಮೆಂಟ್​ ವಲಯದ ಹೊರಗಡೆ ಮಾತ್ರ ಅನ್ವಯಿಸುವುದಾಗಿ ಸ್ಪಷ್ಟಪಡಿಸಿದೆ.

    ಲಾಕ್​ಡೌನ್​ 4.0 ಮೇ 31ಕ್ಕೆ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜೂ.1ರಿಂದ ಆರಂಭವಾಗಲಿರುವ ಲಾಕ್​ಡೌನ್​ 5.0ದಲ್ಲಿ ಪಾಲಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಆದರೆ, ಅಂತರ್​ ರಾಜ್ಯ ಮತ್ತು ಅಂತರ ರಾಜ್ಯ ಸಂಚಾರದ ವಿಷಯವಾಗಿ ಆಯಾ ರಾಜ್ಯ ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಹೇಳಿದೆ.

    ಸಾರ್ವಜನಿಕ ಆರೋಗ್ಯ ಮತ್ತು ಕೋವಿಡ್​-19 ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಸರ್ಕಾರಗಳು ಅಂತರ್​ ರಾಜ್ಯ ಮತ್ತು ಅಂತರ ರಾಜ್ಯ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಸಂಚಾರ ನಿರ್ಬಂಧಿಸುವ ಅನಿವಾರ್ಯತೆ ಎದುರಾದಲ್ಲಿ, ಅದಕ್ಕೆ ಸೂಕ್ತ ಪ್ರಚಾರ ನೀಡಿ ಸಂಚಾರವನ್ನು ನಿರ್ಬಂಧಿಸಬಹುದಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಒಂದು ವರ್ಷದಲ್ಲಿ ಕೋವಿಡ್​-19 ನಿರೋಧಕ ಚುಚ್ಚುಮದ್ದು ಸಿದ್ಧವಾಗೋದು ಅಸಾಧ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts