More

    ಒಂದು ವರ್ಷದಲ್ಲಿ ಕೋವಿಡ್​-19 ನಿರೋಧಕ ಚುಚ್ಚುಮದ್ದು ಸಿದ್ಧವಾಗೋದು ಅಸಾಧ್ಯ

    ಬೆಂಗಳೂರು: ಯಾವುದೇ ಒಂದು ರೋಗನಿರೋಧಕ ಚುಚ್ಚುಮದ್ದನ್ನು ಸಿದ್ಧಪಡಿಸಲು ಕನಿಷ್ಠ ನಾಲ್ಕು ವರ್ಷಗಳಾದರೂ ಬೇಕಾಗುತ್ತದೆ. ಹಾಗಾಗಿ ಕೋವಿಡ್​-19 ನಿರೋಧಕ ಚುಚ್ಚುಮದ್ದನ್ನು ಒಂದು ವರ್ಷದಲ್ಲಿ ಸಿದ್ಧಪಡಿಸಲು ಸಾಧ್ಯವಿಲ್ಲ ಎಂದು ಬಯೋಕಾನ್​ ಮುಖ್ಯಸ್ಥೆ ಕಿರಣ್​ ಮಜುಂದಾರ್​ ಷಾ ಹೇಳಿದ್ದಾರೆ.

    ಶನಿವಾರ ವೆಬಿನಾರ್​ನಲ್ಲಿ ಮಾತನಾಡಿದ ಬಯೋಕಾನ್​ನ ಎಕ್ಸಿಕ್ಯೂಟಿವ್​ ಚೇರ್​ಪರ್ಸನ್​ ಕಿರಣ್​ ಮಜುಂದಾರ್​ ಷಾ, ಕೋವಿಡ್​-19 ನಿರೋಧಕ ಚುಚ್ಚುಮದ್ದನ್ನು ತಯಾರಾಗಿ ಎಲ್ಲರಿಗೂ ಸಿಗುವಂತೆ ಆಗಲು ಸಾಕಷ್ಟು ಸಮಯ ಹಿಡಿಯಲಿದೆ. ಇನ್ನಷ್ಟು ವರ್ಷ ಅದರೊಂದಿಗೆ ಜೀವಿಸುವುದು ಅನಿವಾರ್ಯ. ಹಾಗೂ ಚುಚ್ಚುಮದ್ದು ಸಂಶೋಧನೆಗೆ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

    ಯಾವುದೇ ರೋಗನಿರೋಧಕ ಚುಚ್ಚುಮದ್ದು ಸಿದ್ಧಪಡಿಸುವುದು ತುಂಬಾ ಸಂಕೀರ್ಣವಾದ ಕೆಲಸವಾಗಿದೆ. ಇದನ್ನು ಸಿದ್ಧಪಡಿಸಿ, ಪರೀಕ್ಷಿಸಿ, ಟ್ರಯಲ್​ಗಳನ್ನು ನಡೆಸಿ, ಬಿಡುಗಡೆ ಮಾಡಲು ಕನಿಷ್ಠವೆಂದರೂ ನಾಲ್ಕು ವರ್ಷಗಳು ಬೇಕಾಗುತ್ತವೆ. ಹೀಗಿರುವಾಗ ಒಂದು ವರ್ಷದಲ್ಲಿ ಕೋವಿಡ್​-19 ನಿರೋಧಕ ಚುಚ್ಚುಮದ್ದು ಸಿದ್ಧಪಡಿಸುವುದು ಅಸಾಧ್ಯದ ಮಾತು ಎಂದು ಹೇಳಿದರು.

    ಇನ್ನು ಮುಂದೆ ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ದೇಶಾದ್ಯಂತ ಕರ್ಫ್ಯೂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts