More

    ಇನ್ನು ಮುಂದೆ ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ದೇಶಾದ್ಯಂತ ಕರ್ಫ್ಯೂ

    ನವದೆಹಲಿ: ಕೇಂದ್ರ ಸರ್ಕಾರ ಶನಿವಾರ ಸಂಜೆ ಐದನೇ ಹಂತದ ಲಾಕ್‌ಡೌನ್‌ನ ನಿಯಮಗಳನ್ನು ಪ್ರಕಟಿಸಿದ್ದು, ದೇಶಾದ್ಯಂತ ಪ್ರತಿದಿನ ಕರ್ಫ್ಯೂಗೆ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಸಮಯ ನಿಗದಿಪಡಿಸಿದೆ.

    ಇದನ್ನೂ ಓದಿ: ಜೂನ್ 30ರವರೆಗೆ ಲಾಕ್‌ಡೌನ್ ವಿಸ್ತರಣೆ; ಜೂನ್ 8ರಿಂದ ದೇವಸ್ಥಾನ, ಹೋಟೆಲ್ ‌ಓಪನ್

    ನಾಲ್ಕನೇ ಹಂತದ ಲಾಕ್‌ಡೌನ್ ನಾಳೆಗೆ (ಮೇ 31) ಮುಗಿಯಲಿರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮಗಳನ್ನು ಜೂನ್ 1ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

    ಕಂಟೇನ್‌ಮೆಂಟ್ ಜೋನ್‌ಗಳಲ್ಲಿ ಲಾಕ್‌ಡೌನ್ ಮುಂದುವರಿಯುತ್ತದೆ. ಬಫರ್ ಜೋನ್‌ಗಳನ್ನು ಕೂಡ ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಜಿಲ್ಲೆಯ ಅಧಿಕಾರಿಗಳು ನಿರ್ಧರಿಸಬೇಕು ಎಂದು ಹೊಸ ಆದೇಶದಲ್ಲಿ ತಿಳಿಸಲಾಗಿದೆ.

    ರಾಜ್ಯಗಳ ನಡುವೆ ಮತ್ತು ರಾಜ್ಯಗಳ ಒಳಗಡೆ ಜನರು ಮತ್ತು ಸಾಮಗ್ರಿಗಳ ಸಾಗಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಇದಕ್ಕೆ ಯಾವುದೇ ಪ್ರತ್ಯೇಕ ಪರವಾನಗಿ, ಒಪ್ಪಿಗೆ, ಇ-ಪರ್ಮಿಟ್ ಪಡೆಯುವ ಅವಶ್ಯಕತೆ ಇಲ್ಲ. ಆದರೆ ಪರಿಸ್ಥಿತಿ ಆಧರಿಸಿ ರಾಜ್ಯಗಳು ಬಯಸಿದರೆ ನಿರ್ಬಂಧ ವಿಧಿಸಬಹುದು. ಆದರೆ ಅದಕ್ಕೆ ವ್ಯಾಪಕ ಪ್ರಚಾರ ನೀಡಬೇಕು. ಯಾವುದೇ ರಾಜ್ಯ ಸರ್ಕಾರವೂ ತನ್ನ ರಾಜ್ಯದ ಮೂಲಕ ನಡೆಯುವ ಗೂಡ್ಸ್ ಸಾಗಣೆಯನ್ನು ತಡೆಯುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

    ಇದನ್ನೂ ಓದಿ: ಶಾಲಾ ಬಾಲಕಿ ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ್ದ ಆರೋಪಿಗೆ ಸಿಕ್ತು ಜಾಮೀನು…!

    ಪ್ರಯಾಣಿಕ ರೈಲುಸೇವೆ, ಶ್ರಮಿಕ ವಿಶೇಷ ರೈಲುಗಳು, ದೇಶೀಯ ವಿಮಾನ ಯಾನ, ಹೊರದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವುದು, ಭಾರತದಲ್ಲಿ ಸಿಲುಕಿರುವ ಹೊರದೇಶದವರನ್ನು ಕಳಿಸುವುದು ಮುಂತಾದ ಪ್ರಕ್ರಿಯೆ ಆಯಾ ಕಾಲಕ್ಕೆ ಹೊರಡಿಸುವ ನಿಯಮಗಳಿಗೆ ಅನುಸಾರವಾಗಿ ಮುಂದುವರಿಯಲಿದೆ.

    ಇಂಜಿನಿಯರ್‌ಗಳನ್ನು ರಕ್ಷಿಸಿ: ಕೇಂದ್ರಕ್ಕೆ ಸಚಿವ ಜಾರಕಿಹೊಳಿ ಮೊರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts