More

    ಏಡ್ಸ್ ಸೋಂಕು ತಡೆಗೆ ಜಾಗೃತಿ ಅತ್ಯವಶ್ಯ

    ಹುಕ್ಕೇರಿ: ಎಚ್‌ಐವಿ-ಏಡ್ಸ್ ಸೋಂಕು ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಕ್ಯಾರಗುಡ್ಡದ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.

    ಪಟ್ಟಣದಲ್ಲಿ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಬೆಲ್ಲದ ಬಾಗೇವಾಡಿ ರಾಜೇಶ್ವರಿ ವಿಶ್ವನಾಥ ಕತ್ತಿ ಇನ್‌ಸ್ಟಿಟ್ಯೂಟ್ ಆ್ ನರ್ಸಿಂಗ್ ಸೈನ್ಸ್ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಹದಿಹರೆಯದವರು ಈ ಸೋಂಕಿನ ಕುರಿತು ತಿಳಿವಳಿಕೆ ಹೊಂದಬೇಕು. ಆರೋಗ್ಯದತ್ತ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು ಎಂದರು.

    ಜಾಗೃತಿ ಜಾಥಾ ಹೊಸ ಬಸ್ ನಿಲ್ದಾಣದಿಂದ ಆರಂಭವಾಗಿ ಕೋರ್ಟ್ ಸರ್ಕಲ್ ತಲುಪಿತು. ವಿದ್ಯಾರ್ಥಿಗಳು ಏಡ್ಸ್ ಕುರಿತು ಅರಿವು ಮೂಡಿಸುವ ಹಲವು ಭಿತ್ತಿಪತ್ರ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಂದ ಏಡ್ಸ್ ತಿಳಿವಳಿಕೆ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಲಾಯಿತು.

    ನರ್ಸಿಂಗ್ ಸಂಸ್ಥೆ ಪ್ರಾಚಾರ್ಯ ವಿಠ್ಠಲ ಕಮತಿ, ಶಿಕ್ಷಕರಾದ ಪ್ರಧಾನಿ ವಗ್ಗರ, ಬಸವರಾಜ ಬಡಿಗವಾಡ, ಅಕ್ಷತಾ ದೇಶಪಾಂಡೆ, ಪಿಎಸ್‌ಐ ಅಭಿಜಿತ ಅಕ್ಕತಂಗೇರಹಾಳ, ಮಂಜುನಾಥ ಕಬ್ಬೂರ, ಸದ್ದಾಂ ರಾಮದುರ್ಗ, ಹನಮಂತ ಖೋತ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts