ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

Sameera Reddy
Published on

ಮುಂಬೈ: ಒಂದು ಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಸಮೀರಾ ರೆಡ್ಡಿ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ವರದನಾಯಕ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಜತೆ ನಟಿಸುವ ಮೂಲಕ ಕನ್ನಡಿಗರಿಗೂ ಸಮೀರಾ ಪರಿಚಿತರಾಗಿದ್ದಾರೆ.

ಸಿನಿಮಾದಿಂದ ದೂರವಾಗಿದ್ದರೂ ಸಹ ಇನ್​ಸ್ಟಾಗ್ರಾಂನಲ್ಲಿ ಸಮೀರಾ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ ಪಾಸಿಟಿವ್​ ಸ್ಟೋರಿಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೆ, ತಮ್ಮ ಕುಟುಂಬದ ಜತೆಗಿನ ಸುಮಧುರ ಕ್ಷಣಗಳನ್ನು ಸಹ ಶೇರ್​ ಮಾಡಿಕೊಳ್ಳುತ್ತಾರೆ. ಇದಿಷ್ಟೇ ಅಲ್ಲದೆ, ಅಭಿಮಾನಿಗಳ ಜತೆ ಸಂವಾದವನ್ನು ಆಗಾಗ ನಡೆಸುತ್ತಿರುತ್ತಾರೆ.

ತಾಜಾ ಸಂಗತಿ ಏನೆಂದರೆ, ಸಿನಿಮಾ ಇಂಡಸ್ಟ್ರಿಯಲ್ಲಿ ತಾವು ಅನುಭವಿಸಿದ ಕಹಿ ಘಟನೆಯನ್ನು ಇತ್ತೀಚೆಗೆ ತಮಿಳು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಮೀರಾ ಓಪನ್​ ಆಗಿ ಹೇಳಿಕೊಂಡಿದ್ದಾರೆ. ಸುಮಾರು 10 ವರ್ಷಗಳ ಹಿಂದೆ ನನ್ನ ತೆಳ್ಳಗಿನ ದೇಹದ ಆಕಾರದಿಂದಾಗಿ ನಾನು ಚಿತ್ರರಂಗದಲ್ಲಿ ಬಾಡಿ ಶೇಮಿಂಗ್ ಕಾಮೆಂಟ್​ಗಳನ್ನು ಎದುರಿಸಿದ್ದೇನೆ ಎಂದರು.

ತೂಕವನ್ನು ಹೆಚ್ಚಿಸಿಕೊಳ್ಳುವಂತೆ ನನ್ನನ್ನು ಕೇಳಿದರು. ಇನ್ನೂ ಕೆಲವರು ನನ್ನ ಸ್ತನದ ಗಾತ್ರವನ್ನು ಹೆಚ್ಚಿಸಲು ಹೇಳಿದರು. ಹತ್ತು ವರ್ಷಗಳ ಹಿಂದೆ ನನ್ನ ಪರಿಸ್ಥಿತಿ ನಿಜಕ್ಕೂ ವಿಚಿತ್ರವಾಗಿತ್ತು. ಆ ಸಮಯದಲ್ಲಿ ಎಲ್ಲರೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದರು. ಆದರೆ, ನಾನು ಯಾವಾಗಲೂ ಬ್ರೆಸ್ಟ್ ಪ್ಯಾಡ್ ಬಳಸುತ್ತಿದ್ದೆ. ಆಪರೇಷನ್​ ಮಾಡಿಸಿಕೊಳ್ಳಲು ನನಗೆ ಸೂಚಿಸಿದಾಗ, ಆ ಪರಿಸ್ಥಿತಿಯಂತೂ ತುಂಬಾ ನನಗೆ ಸಂದಿಗ್ಧವಾಗಿತ್ತು ಮತ್ತು ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ ಎಂದು ಕಹಿ ಘಟನೆಯನ್ನು ಸಮೀರಾ ಮೆಲಕು ಹಾಕಿದರು.

ಆದರೆ ಈಗ ಹಿಂತಿರುಗಿ ನೋಡಿದಾಗ, ಅವರು ಹೇಳಿದ್ದಕ್ಕೆಲ್ಲ ಹೌದು ಎಂದು ಹೇಳಲಿಲ್ಲ ಎಂಬ ಸಮಾಧಾನ ನನಗಿದೆ. ಅನೇಕ ಕಲಾವಿದೆಯರು ತಮಗೆ ಬಂದ ಸೂಚನೆಯನ್ನು ಪಾಲಿಸಿದ್ದಾರೆ. ಇದರಿಂದ ಅವರಿಗೆ ಅನುಕೂಲವಾಗಿರಬಹುದು ಮತ್ತು ಸಂತೋಷವನ್ನು ಪಡೆದಿರಬಹುದು. ಏನೇ ಇರಲಿ ಬದುಕಿ, ಬದುಕಲು ಬಿಡಿ ಎಂದು ಮಾತು ಹೇಳಬೇಕಷ್ಟೆ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net