ನೇಹಾ ಮದುವೆಯಲ್ಲಿ ಊರ್ವಶಿ ತೊಟ್ಟ ಲೆಹಂಗಾ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!

Urvashi Rautela - Neha Kakkar
Published on

ಮುಂಬೈ: ದರ್ಶನ್​ ಅಭಿನಯದ 'ಐರಾವತ' ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್​ ನಟಿ ಮತ್ತು ಮಾಡಲ್​ ಊರ್ವಶಿ ರೌತೇಲ, ಕಾಸ್ಟ್ಲಿ ಬಟ್ಟೆಗಳನ್ನು ತೊಡುವುದರಲ್ಲಿ ಬಹಳ ಫೇಮಸ್​. ಪಾರ್ಟಿಗಳಿರಲಿ ಅಥವಾ ಪ್ರಶಸ್ತಿ ಪ್ರದಾನ ಸಮಾರಂಭಗಳಿರಲಿ, ಊರ್ವಶಿ ಮಾತ್ರ ತಮ್ಮ ಕಾಸ್ಟ್ಯೂಮ್​ಗಳಿಂದ ಗಮನಸೆಳೆಯುವುದರಲ್ಲಿ ಮೊದಲಿಗರು.

ಈಗ್ಯಾಕೆ ಈ ಮಾತು ಎಂದರೆ, ಇತ್ತೀಚೆಗೆ ಊರ್ವಶಿ ಗಾಯಕಿ ನೇಹಾ ಕಕ್ಕರ್​ ಮತ್ತು ರೋಹನ್​ಪ್ರೀತ್​ ಸಿಂಗ್​ ಅವರ ಮದುವೆಯಲ್ಲಿ ಭಾಗವಹಿಸಿದ್ದಾರೆ. ಅಷ್ಟೇ ಆಗಿದ್ದರೆ, ಸುದ್ದಿಯಾಗುತ್ತಿರಲಿಲ್ಲವೇನೋ? ಆದರೆ, ಮದುಮಗಳಿಗಿಂತ ಹೆಚ್ಚು ಬೆಲೆ ಬಾಳುವ ಲೆಹಂಗಾ ತೊಟ್ಟು, ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ ಊರ್ವಶಿ.

ನೇಹಾ ಕಕ್ಕರ್​ ಮದುವೆಯಲ್ಲಿ ರೇಣು ಟಂಡನ್​ ಡಿಸೈನ್​ ಮಾಡಿರುವ ಒಂದು ಲೇಸರ್​ ಕಟ್​ ಲೆದರ್​ ಲೆಹೆಂಗಾದಲ್ಲಿ ಊರ್ವಶಿ ಕಾಣಿಸಿಕೊಂಡಿದ್ದರು. ಈ ವಿಶೇಷ ಲೆಹಂಕಾದ ಬೆಲೆ ಎಷ್ಟಿರಬಹುದು ಎಂದು ಮದುವೆಯಲ್ಲಿ ಪಾಲ್ಗೊಂಡಿದ್ದವರೆಲ್ಲಾ ಪ್ರಶ್ನಿಸಿದ್ದರು.

ಇದಕ್ಕೆ ಉತ್ತರ ಆಗ ಸಿಕ್ಕಿರಲಿಲ್ಲ.ಕೊನೆಗೆ, ಊರ್ವಶಿ ಅವರ ಸ್ಟೈಲಿಸ್ಟ್​ ಆಗಿರುವ ಸಾಂಚಿ ಜನೇಜ ಅವರನ್ನು ಈ ಲೆಹಂಗಾದ ಬೆಲೆ ಎಷ್ಟಿರಬಹುದು ಎಂದು ಕೆಲವರು ಪ್ರಶ್ನಿಸಿದಾಗ, ಅವರು ಹೇಳಿದ ಬೆಲೆ ಕೇಳಿದವರಿಗೆ ತಲೆ ತಿರುಗಿದಂತಾಗಿದೆ. ಕಾರಣ, ಈ ಲೆಹಂಗಾಗೆ ಊರ್ವಶಿ ಕೊಟ್ಟ ಮೊತ್ತ 55 ಲಕ್ಷ ರೂ.ಗಳು ಎಂದು ಹೇಳಲಾಗುತ್ತಿದೆ.

ಅಂದಹಾಗೆ, ಇಷ್ಟೊಂದು ಬೆಲೆಯ ಲೆಹಂಗಾವನ್ನು ಖುದ್ದು ಮದುಮಗಳು ನೇಹಾ ಸಹ ತೊಟ್ಟಿರಲಿಲ್ಲವಂತೆ. ಮೂಲಗಳ ಪ್ರಕಾರ, ಊರ್ವಶಿ ಅವರ ಲೆಹಂಗಾದ ಬೆಲೆ, ನೆಹಾ ತೊಟ್ಟ ಲೆಹಂಗಾಗಿಂತ 10 ಪಟ್ಟು ಜಾಸ್ತಿ ಬೆಲೆಯದ್ದಂತೆ. ಹಾಗಾದರೆ, ನೇಹಾ ತೊಟ್ಟಿದ್ದ ಲೆಹಂಗಾದ ಬೆಲೆ ಎಷ್ಟಿರಬಹುದು ಎಂದು ಅಂದಾಜಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net