20 ಲಕ್ಷ ರೂ. ಬೆಲೆಯ ಗೌನ್​ ಧರಿಸಿ ಮಿಂಚಿದ ಐರಾವತ ಬೆಡಗಿ!

1285216
Published on

ಮುಂಬೈ: ಅದ್ಧೂರಿಯಾಗಿ ನಡೆದ ಐಫಾ ಅವಾರ್ಡ್​​ 2022 ಕಾರ್ಯಕ್ರಮದಲ್ಲಿ ಮಾಡೆಲ್​ ಊರ್ವಶಿ ರೌಟೆಲ ಭಾರೀ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಧರಿಸಿದ್ದ ದುಬಾರಿ ಬೆಲೆಯ ಬಟ್ಟೆ.

ಸಿನಿಮಾ ತಾರೆಯರು ಧರಿಸುವ ಬಟ್ಟೆಗಳಲ್ಲಿ ಮಧ್ಯಮವರ್ಗದವರ ಜನರ ವರ್ಷದ ಜೀವನವೇ ಕಳೆಯುತ್ತೆ. ಲಕ್ಷಾಂತರ ರೂ. ಬೆಲೆಯ ಬಟ್ಟೆ ಧರಿಸುವ ಮೂಲಕ ಮಾಡೆಲ್​​ ಜತೆಗೆ ನಟಿಯಾಗಿರುವ ಊರ್ವಶಿ ರೌಟೆಲ ಎಲ್ಲರ ಹುಬ್ಬೇರಿಸಿದ್ದಾರೆ.

ಕೇಸರಿ ಬಣ್ಣದ ಉದ್ದದ ಗೌನ್​ ಜತೆಗೆ ಪ್ರಸಿದ್ಧ ಅಮಟೊ ಡೈಮಂಡ್​​ ಕಿವಿಯೋಲೆ, ಅದಕ್ಕೆ ತಕ್ಕಂತೆ ಎಡಗೈಯಲ್ಲಿ ಉಂಗುರಕ್ಕೆ ಅಂಟಿಕೊಂಡಿರುವ ಬ್ರೇಸ್​ಲೇಟ್​ ಧರಿಸಿರುವ ಉರ್ವಶಿ ಈವರೆಗೂ ಧರಿಸಿರುವ ದುಬಾರಿ ಬೆಲೆಯ ಗೌನ್​​ಗಳಲ್ಲಿ ಇದೂ ಒಂದಾಗಿದೆ. ವಿಶೇಷ ವಿನ್ಯಾಸ ಈ ಆಭರಣ ಗೌನ್​​ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ.

ಊರ್ವಶಿ ಅವರು ತೊಟ್ಟಿರುವ ಈ ಗೌನ್​​ ತಯಾರಿಕೆಗೆ 20 ಜನರು 1300 ಗಂಟೆಗಳ ಸಮಯವನ್ನು ತೆಗೆದುಕೊಂಡಿದ್ದಾರೆ. ಇದು ಅತ್ಯಂತ ಅದ್ಭುತವಾದ ಉಡುಪುಗಳಲ್ಲಿ ಒಂದಾಗಿದೆ.ಇತ್ತೀಚೆಗೆ ಸ್ಮೈಲ್​ ಟ್ರೇನ್​ ಫೌಂಡೇಷನ್​ನ ರಾಯಭಾರಿಯಾಗಿ ಆಯ್ಕೆಯಾಗಿರುವ ಊರ್ವಶಿ , 2021ರ ಮಿಸ್​ ಯೂನಿವರ್ಸ್​ ತೀರ್ಪುಗಾರರಾಗಿಯೂ ಭಾಗವಹಿಸಿದ್ದರು.

ಇತ್ತೀಚೆಗೆ 50 ಲಕ್ಷ ರೂ.ಬೆಲೆಯ ಗೌನ್​ ಧರಿಸಿ ಸುದ್ದಿಯಾಗಿದ್ದರು. ನಿನ್ನೆ ರಾತ್ರಿ ಅಬುಧಾಬಿಯಲ್ಲಿ ನಡೆದ ಐಫಾ ಅವಾರ್ಡ್​ ಕಾರ್ಯಕ್ರಮದಲ್ಲಿ ಇತರೆ ಬಾಲಿವುಡ್​ ತಾರೆಯರೂ ಮಿಂಚಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net